ಹೈದರಾಬಾದ್ ಭೇಟಿ ವೇಳೆ ನೀಡಿದ್ದ ಆತಿಥ್ಯಕ್ಕೆ ಕೆಸಿಆರ್ ಗೆ ಇವಾಂಕಾ ಧನ್ಯವಾದ

ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸಲು ನ.28 ರಂದು ಹೈದರಾಬಾದ್ ಗೆ ಭೇಟಿ ನೀಡಿದ್ದ ವೇಳೆ ತಮಗೆ ನೀಡಿದ ಆದರದ ಆತಿಥ್ಯಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ, ಸಲಹೆಗಾರರೂ ಆದ...
ಇವಾಂಕ ಟ್ರಂಪ್- ಪ್ರಧಾನಿ ನರೇಂದ್ರ ಮೋದಿ
ಇವಾಂಕ ಟ್ರಂಪ್- ಪ್ರಧಾನಿ ನರೇಂದ್ರ ಮೋದಿ
Updated on
ಹೈದರಾಬಾದ್: ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸಲು ನ.28 ರಂದು ಹೈದರಾಬಾದ್ ಗೆ ಭೇಟಿ ನೀಡಿದ್ದ ವೇಳೆ ತಮಗೆ ನೀಡಿದ ಆದರದ ಆತಿಥ್ಯಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ, ಸಲಹೆಗಾರರೂ ಆದ ಇವಾಂಕ ಟ್ರಂಪ್ ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್ ಗೆ ಧನ್ಯವಾದ ತಿಳಿಸಿದ್ದಾರೆ. 
ಕೈ ಬರವಣಿಗೆಯಲ್ಲಿ ಕೆ.ಸಿ ಚಂದ್ರಶೇಖರ್ ರಾವ್ ಅವರಿಗೆ ಪತ್ರ ಬರೆದಿರುವ ಇವಾಂಕ ಟ್ರಂಪ್, ಹೈದರಾಬಾದ್ ಗೆ ನೀಡಿದ್ದ ಭೇಟಿಯನ್ನು ಅದ್ಭುತ ಮತ್ತು ಸ್ಪೂರ್ತಿದಾಯಕ ಅನುಭವ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇವಾಂಕ ಟ್ರಂಪ್ ಗೆ ಔತಣ ಕೂಟ ಆಯೋಜಿಸಿದ್ದರು.  
" ತೆಲಂಗಾಣದ ಜನತೆಯ ಆತಿಥ್ಯ ಮನಮುಟ್ಟುವಂತಿತ್ತು, ಇದಕ್ಕಾಗಿ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ ಎಂದು ಇವಾಂಕ ಟ್ರಂಪ್ ಕೆಸಿಆರ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಭಾರತಕ್ಕೆ ಮುಂದಿನ ಭೇಟಿಯನ್ನು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com