ಇಸ್ರೇಲ್ ರಾಜಧಾನಿ ಜೆರುಸಲೇಂ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆ ನಿರ್ಣಯ, ವೀಟೊ ಚಲಾಯಿಸಿದ ಅಮೆರಿಕ!

ಜೆರುಸಲೇಂನ್ನು ಇಸ್ರೇಲ್‌ ನ ರಾಜಧಾನಿಯಾಗಿ ಮಾನ್ಯ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರ ನಿರ್ಧಾರವನ್ನು ತಿರಸ್ಕರಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯವೊಂದಕ್ಕೆ ಅಮೆರಿಕ ವೀಟೊ ಚಲಾಯಿಸುವ ಮೂಲಕ ಹೊಸದೊಂದು ಹೋರಾಟಕ್ಕೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಶ್ವಸಂಸ್ಥೆ: ಜೆರುಸಲೇಂನ್ನು ಇಸ್ರೇಲ್‌ ನ ರಾಜಧಾನಿಯಾಗಿ ಮಾನ್ಯ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರ ನಿರ್ಧಾರವನ್ನು ತಿರಸ್ಕರಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯವೊಂದಕ್ಕೆ ಅಮೆರಿಕ ವೀಟೊ ಚಲಾಯಿಸುವ  ಮೂಲಕ ಹೊಸದೊಂದು ಹೋರಾಟಕ್ಕೆ ಮುಂದಾಗಿದೆ.
ಇಸ್ರೇಲ್‌ಗೆ ಅಮೆರಿಕದ ರಾಯಭಾರ ಕಚೇರಿಯನ್ನು ಈಗಿನ ಟೆಲ್ ಅವೀವ್‌ನಿಂದದ ಜೆರುಸಲೇಂಗೆ ಸ್ಥಳಾಂತರಿಸುವುದಾಗಿ ಅಮೆರಿಕದ ಅಧ್ಯಕ್ಷರು ಇತ್ತೀಚೆಗೆ ಘೋಷಿಸಿದ್ದರು. ಆ ಮೂಲಕ, ಜೆರುಸಲೇಂನ್ನು ಇಸ್ರೇಲ್ ರಾಜಧಾನಿ  ಎಂಬುದಾಗಿ ಟ್ರಂಪ್ ಮಾನ್ಯ ಮಾಡಿದ್ದರು. ಆದರೆ ಅಮೆರಿಕ ನಿರ್ಧಾರ ವಿಶ್ವ ಸಮುದಾಯದಲ್ಲಿ ವ್ಯಾಪಕ ವಿರೋಧಕ್ಕೆ ಗ್ರಾಸವಾಗುತ್ತಿದ್ದಂತೆ ಮತ್ತು ಮುಸ್ಲಿಂ ರಾಷ್ಟ್ರಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ವಿಶ್ವಸಂಸ್ಥೆ  ಟ್ರಂಪ್‌ ರ ನಿರ್ಧಾರವನ್ನು ತಿರಸ್ಕರಿಸುವ ಕರಡು ನಿರ್ಣಯ ಮಂಡನೆ ಮಾಡಿತು.
ಇದೀಗ ವಿಶ್ವಸಂಸ್ಥೆಯ ಈ ನಿರ್ಧಾರವನ್ನೂ ಪ್ರಶ್ನಿಸುವಂತೆ ಅಮೆರಿಕ ವೀಟೋ ಅಧಿಕಾರ ಚಲಾವಣೆ ಮಾಡಿದ್ದು, ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲಿ ನಿರ್ಣಯಕ್ಕೆ ವೀಟೊ ಚಲಾಯಿಸಿದ್ದಾರೆ. ಅಮೆರಿಕದ ಈ ನಿರ್ಣಯಕ್ಕೆ  15 ಸದಸ್ಯರ ಭದ್ರತಾ ಮಂಡಳಿಯ ಇತರ ಎಲ್ಲ 14 ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ನಿಕ್ಕಿ ಹ್ಯಾಲಿ ಅವರು, "ತನ್ನ ರಾಯಭಾರಿಯನ್ನು ಅಮೆರಿಕ ಎಲ್ಲಿ ನಿಯೋಜಿಸಬೇಕು ಎಂಬುದನ್ನು ಅದಕ್ಕೆ ಯಾರೂ ಹೇಳುವಂತಿಲ್ಲ" ಎಂದು ಹೇಳಿದರು. 
ಜೆರುಸಲೇಂ ಇಸ್ರೇಲ್ ಮತ್ತು ಫೆಲೆಸ್ತೀನೀಯರ ನಡುವಿನ ಮಾತುಕತೆ ಮೂಲಕ ಬಗೆಹರಿಯಬೇಕಾದ ವಿಷಯವಾಗಿದೆ ಎಂದು ವಿಶ್ವಸಂಸ್ಥೆಯ ನಿರ್ಣಯ ಹೇಳುತ್ತದೆ. 'ಜೆರುಸಲೇಂನ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ  ತೆಗೆದುಕೊಳ್ಳಲಾಗಿರುವ ನಿರ್ಧಾರಗಳ’ ಬಗ್ಗೆ ನಿರ್ಣಯ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಆದಾಗ್ಯೂ, ನಿರ್ಣಯವು ಟ್ರಂಪ್ ನಿರ್ಧಾರವನ್ನು ನೇರವಾಗಿ ಪ್ರಸ್ತಾಪಿಸುವುದಿಲ್ಲ ಎಂದು ಹೇಳಿದೆ.
ಇನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗುವ ಯಾವುದೇ ನಿರ್ಧಾರ ಅಂಗೀಕಾರಗೊಳ್ಳಬೇಕಾದರೆ 15 ಸದಸ್ಯರ ಪೈಕಿ ಒಂಬತ್ತು ಸದಸ್ಯರ ಅನುಮೋದನೆ ಬೇಕಾಗುತ್ತದೆ. ಅದೇ ವೇಳೆ, ಅಮೆರಿಕ, ರಷ್ಯಾ, ಚೀನಾ,  ಬ್ರಿಟನ್, ಫ್ರಾನ್ಸ್- ಈ ಐದು ವಿಶೇಷ ವೀಟೊ ಅಧಿಕಾರ ಹೊಂದಿರುವ ದೇಶಗಳು ವೀಟೊ ಚಲಾಯಿಸಿ ಯಾವುದೇ ನಿರ್ಣಯವನ್ನು ತಡೆಹಿಡಿಯಬಹುದಾಗಿದೆ.
ನಿರ್ಣಯಕ್ಕೆ ಅಮೆರಿಕದ ಮಿತ್ರ ದೇಶಗಳ ಬೆಂಬಲ
ಜೆರುಸಲೇಂ ಸ್ಥಾನಮಾನದ ಬಗ್ಗೆ ತೆಗೆದುಕೊಳ್ಳಲಾದ ಯಾವುದೇ ನಿರ್ಧಾರವು, "ಯಾವುದೇ ಕಾನೂನು ಮಾನ್ಯತೆಯನ್ನು ಹೊಂದಿರುವುದಿಲ್ಲ, ಅದರ ಪರಿಣಾಮವು ಶೂನ್ಯವಾಗಿದೆ ಹಾಗೂ ಅದನ್ನು ಹಿಂದಕ್ಕೆ ಪಡೆದುಕೊಳ್ಳಬೇಕು’  ಎಂದು ಹೇಳುವ ನಿರ್ಣಯದ ಪರವಾಗಿ ಅಮೆರಿಕದ ಮಿತ್ರ ದೇಶಗಳಾದ ಬ್ರಿಟನ್, ಫ್ರಾನ್ಸ್, ಇಟಲಿ, ಜಪಾನ್ ಮತ್ತು ಉಕ್ರೇನ್‌ ದೇಶಗಳು ಮತ ಹಾಕಿವೆ.
ವಿಶ್ವಸಂಸ್ಥೆಗೆ ತಲೆನೋವು ತಂದ ಅಮೆರಿಕ ನಡೆ, ಮತ್ತೆ ಸಾಮಾನ್ಯ ಸಭೆ ಸೇರಲು ನಿರ್ಧಾರ
ಏತನ್ಮಧ್ಯೆ ಅಮೆರಿಕ ನಿರ್ಧಾರ ಇದೀಗ ವಿಶ್ವಸಂಸ್ಥೆಗೆ ಹೊಸ ತಲೆನೋವು ತಂದಿದ್ದು, ಮತ್ತೆ ಸಾಮಾನ್ಯ ಸಭೆ ಸೇರಲು ನಿರ್ಧರಿಸಿದೆ. ಒಟ್ಟು 193 ಸದಸ್ಯ ರಾಷ್ಟ್ರಗಳ ರಾಯಭಾರಿಗಳು ಈ ಸಾಮಾನ್ಯಸಭೆಯಲ್ಲಿ ಪಾಲ್ಗೊಳ್ಳಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com