ನವದೆಹಲಿ: ದೆಹಲಿಯಲ್ಲಿ ಮೆಟ್ರೋದ ಮುಂದುವರೆದ ಭಾಗವಾಗಿರುವ ಮೆಜೆಂತಾ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿ ಮೆಟ್ರೋ ರೈಲಿನಲ್ಲಿ ಮೊದಲ ಸಂಚಾರ ಕೂಡ ಮಾಡಿದರು.
ಪ್ರಮುಖ ವಿಚಾರವೆಂದರೆ ಈ ಬಹು ನಿರೀಕ್ಷಿತ ಈ ಕಾರ್ಯಕ್ರಮಕ್ಕೆ ದೆಹಲಿ ಮೆಟ್ರೋ ಅಧಿಕಾರಿಗಳು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಆಹ್ವಾನವನ್ನೇ ನೀಡಿರಲಿಲ್ಲ. ಹೀಗಾಗಿ ಸಿಎಂ ಕೇಜ್ರಿವಾಲ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಆಹ್ವಾನ ನೀಡಲಾಗಿರಲಿಲ್ಲ. ಇದೇ ಕಾರಣಕ್ಕೆ ಕೇಜ್ರಿವಾಲ್ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎನ್ನಲಾಗಿದೆ.
ಈ ಹಿಂದೆ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಅವರಿಗೆ ಆಹ್ವಾನ ಕುರಿತು ಯಾವುದೇ ರೀತಿಯ ಆಹ್ವಾನವನ್ನು ಕಾರ್ಯಾಲಯ ಸ್ವೀಕರಿಸಿಲ್ಲ ಎಂದು ದೆಹಲಿ ಸರ್ಕಾರದ ವಕ್ತಾರರು ಹೇಳಿದ್ದಾರೆ. ಕಾರ್ಯಕ್ರಮಕ್ಕೆ ನಮಗೆ ಅಧಿಕೃತ ಆಹ್ವಾನ ಬಂದಿಲ್ಲ. ನಮ್ಮ ಉನ್ನತ ಆದ್ಯತೆಯು ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಸುರಕ್ಷಿತ ಮೆಟ್ರೋ ಸೇವೆ ನೀಡುವುದೇ ಆಗಿದೆ. ಇಲ್ಲಿಯವರೆಗೂ ನಾವು ಯಾವುದೇ ಆಮಂತ್ರಣವನ್ನು ಸ್ವೀಕರಿಸಿಲ್ಲ ಎಂದು ಹೇಳಿದರು.
ಇನ್ನು ಇಂದು ಉದ್ಘಾಟನೆಯಾದ ದೆಹಲಿ ಮೆಟ್ರೋ ರೈಲಿನ ಮೆಜೆಂತಾ ಮೆಟ್ರೋ ಲೈನ್ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ರೈಲಿನಲ್ಲಿ ಮೊದಲ ಪ್ರಯಾಣ ಮಾಡಿದರು.
ದೆಹಲಿಯ ಜನಕಪುರಿಯಿಂದ ನೋಯ್ಡಾದವರೆಗೆ ಮೆಜೆಂತಾ ಮೆಟ್ರೋ ಲೈನ್ ನಿರ್ಮಿಸಲಾಗಿದ್ದು, ಈ ಹೊಸ ಮಾರ್ಗ ದೆಹಲಿ ನೋಯ್ಡಾ ಮತ್ತು ದಕ್ಷಿಣ ದೆಹಲಿಯ ಪ್ರಯಾಣದ ವೇಳೆ ಕಡಿಮೆಯಾಗಲಿದ್ದು ದೆಹಲಿಯ ಹೊರಗೆ ಮೊದಲ ಇಂಟರ್ ಚೇಂಜ್ ಆಗಿ ಬಟಾನಿಕಲ್ ಗಾರ್ಡನ್ ಸ್ಪೇಷನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.