ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾದವ್ ಮತ್ತು ಅವರ ಪೋಷಕರ ಭೇಟಿ ಕುರಿತಂತೆ ಇದೇ ಮೊದಲ ಬಾರಿಗೆ ಕೇಂದ್ರ ವಿದೇಶಾಂಗ ಸಚಿವೆ ಸಂಸತ್ ನಲ್ಲಿ ಹೇಳಿಕೆ ನೀಡಿದ್ದು, ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ತನ್ನ ತಾಯಿಯ ವೇಷ ಕಂಡು ಅವರು ವಿಧವೆಯಾಗಿದ್ದಾರೆ ಎಂದು ಕುಲಭೂಷಣ್ ಜಾದವ್ ಆಘಾತಗೊಂಡಿದ್ದ ಎಂದು ಹೇಳಿದ್ದಾರೆ. ಪಾಕಿಸ್ತಾನದ ಅಧಿಕಾರಿಗಳು ಕುಲಭೂಷಣ್ ಜಾದವ್ ಅವರ ತಾಯಿ ಆವಂತಿ ಯಾದವ್ ಅವರ ಮಂಗಳಸೂತ್ರ, ಸಿಂಧೂರ ಮತ್ತು ಒಡವೆಗಳನ್ನು ತೆಗಿಸಿದ್ದರು. ಬಳಿಕ ಜಾದವ್ ಭೇಟಿಗೆ ಅನುವು ಮಾಡಿಕೊಟ್ಟಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಗಂಡ ತೀರಿ ಹೋದಾಗ ಸಿಂಧೂರ, ತಾಳಿ ತೆಗೆಯುತ್ತಾರೆ. ಹೀಗಾಗಿ ತಾಯಿ ವೇಷ ನೋಡಿ ಕುಲಭೂಷಣ್ ಜಾಧವ್ ಆಘಾತಗೊಂಡಿದ್ದ ಎಂದು ಸುಷ್ಮಾ ಹೇಳಿದ್ದಾರೆ.