ಮುಂಬೈ ಅಗ್ನಿ ದುರಂತಕ್ಕೆ ನಗರದಲ್ಲಿ ಹೆಚ್ಚಿದ ವಲಸಿಗರ ಸಂಖ್ಯೆಯೇ ಕಾರಣ: ಹೇಮಾ ಮಾಲಿನಿ ವಿವಾದಾತ್ಮಕ ಹೇಳಿಕೆ

ಮುಂಬೈ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ 14 ಜನರ ಸಾವಿಗೆ ನಗರದಲ್ಲಿ ಹೆಚ್ಚಾಗಿರುವ ಜನಸಂಖ್ಯೆ ಕಾರಣ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿಯವರು ಶುಕ್ರವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ...
ಹೇಮಾ ಮಾಲಿನಿ
ಹೇಮಾ ಮಾಲಿನಿ
ನವದೆಹಲಿ: ಮುಂಬೈ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ 14 ಜನರ ಸಾವಿಗೆ ನಗರದಲ್ಲಿ ಹೆಚ್ಚಾಗಿರುವ ಜನಸಂಖ್ಯೆ ಕಾರಣ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿಯವರು ಶುಕ್ರವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 
ಅಗ್ನಿ ದುರಂತ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ನಗರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಕಮಲಾ ಮಿಲ್ಸ್ ಕಾಂಪೌಂಡ್ ನಲ್ಲಿ ಸಂಭವಿಸಿರುವ ಅಗ್ನಿ ದುರಂತಕ್ಕೆ ಇದೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. 
ಮುಂಬೈ ನಗರಾಡಳಿತದ ಅಧಿಕಾರಿಗಳು ನಗರಕ್ಕೆ ಬರುವ ಪ್ರತೀಯೊಬ್ಬ ವಲಸಿಗರೂ ನಗರದಲ್ಲಿರಲು ಅನುಮತಿ ನೀಡುತ್ತದೆ. ಇದರಿಂದ ನಗರದಲ್ಲಿ ಜನಸಂಖ್ಯೆ ಹೆಚ್ಚಳಗೊಂಡಿದ್ದು, ಜನಸಂಖ್ಯೆಯನ್ನು ನಿಯಂತ್ರಿಸಲು ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತೀಯೊಂದು ನಗರದಕ್ಕೂ ಜನಸಂಖ್ಯೆ ಮಿತಿಯಿರಬೇಕು. ಮಿತಿಗಿಂತಲೂ ಹೆಚ್ಚಾಗಿ ಬರುವ ವಲಸಿಗರನ್ನು ಇತರೆ ನಗರಗಳಿಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com