ಈ ಬಗ್ಗೆ ಶಿಮ್ಲಾ ಪೊಲೀಸರು ಇಬ್ಬರ ವಿರುದ್ಧವೂ ದೂರು ದಾಖಲಿಸಿಕೊಂಡಿದ್ದು, ಶಾಸಕಿ ಆಶಾ ಕುಮಾರಿ ಹಾಗೂ ಮಹಿಳಾ ಪೊಲೀಸ್ ಪೇದೆ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕಿ ಆಶಾ ಕುಮಾರಿ ಅವರು, ಜನರ ನೂಕು ನುಗ್ಗಲು ನಡುವೆ ಆ ಮಹಿಳಾ ಪೊಲೀಸ್ ಪೇದೆ ಉದ್ದೇಶಪೂರ್ವಕವಾಗಿಯೇ ನನ್ನನ್ನು ತಳ್ಳಿದರು. ಅಲ್ಲದೆ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದರು. ನಾನು ನನ್ನ ಕರ್ತವ್ಯದಲ್ಲಿದ್ದಾಗ ಆಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಮಾತ್ರವಲ್ಲದೇ ನನನ್ನು ಥಳಿಸಿದ್ದಾರೆ ಹೀಗಾಗಿ ದೂರು ನೀಡಿದ್ದೇನೆ ಎಂದು ಆಶಾ ಕುಮಾರಿ ಹೇಳಿದ್ದಾರೆ.