ಪುಲ್ವಾಮ ದಾಳಿ ಪ್ರಧಾನಿ ವಿದೇಶಾಂಗ ನೀತಿ ವೈಫಲ್ಯಕ್ಕೆ ಉದಾಹರಣೆ: ಕಾಂಗ್ರೆಸ್

ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋತ್ಪಾದಕ ದಾಳಿ ನಡೆದಿದ್ದು, ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು...
ಪುಲ್ವಾಮ ದಾಳಿ ಪ್ರಧಾನಿ ವಿದೇಶಾಂಗ ನೀತಿ ವೈಫಲ್ಯಕ್ಕೆ ಉದಾಹರಣೆ: ಕಾಂಗ್ರೆಸ್
ಪುಲ್ವಾಮ ದಾಳಿ ಪ್ರಧಾನಿ ವಿದೇಶಾಂಗ ನೀತಿ ವೈಫಲ್ಯಕ್ಕೆ ಉದಾಹರಣೆ: ಕಾಂಗ್ರೆಸ್
Updated on: 
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋತ್ಪಾದಕ ದಾಳಿ ನಡೆದಿದ್ದು, ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯವನ್ನು ತೋರುತ್ತದೆ ಎಂದು ಹೇಳಿದೆ. 
ಕಾಂಗ್ರೆಸ್ ನ ವಕ್ತಾರರಾದ ಸುಷ್ಮಿತಾ ದೇವ್ ಪುಲ್ವಮಾ ದಾಳಿಯ ಬಗ್ಗೆ ಮಾತನಾಡಿದ್ದು, ಪುಲ್ವಾಮದಲ್ಲಿ ಸಿಆರ್ ಪಿಎಫ್ ಮೇಲೆ ನಡೆದಿರುವ ದಾಳಿ ಭಾರತಕ್ಕೆ ದೇಶ ವಿರೋಧಿಗಳು ಹೆದರುವುದಿಲ್ಲ ಎಂಬ ಸಂದೇಶ ರವಾನೆ ಮಾಡಿದೆ ಎಂದು ಹೇಳಿದ್ದಾರೆ. 
ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ ಬಲಿಷ್ಠ ರಾಷ್ಟ್ರ ಎಂದು ಹೇಳಿದ್ದರು, ಆದರೆ ಕದನ ವಿರಾಮ ಉಲ್ಲಂಘನೆ ಹಾಗೂ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯ, ಕಾಂಗ್ರೆಸ್ ಭಾರತದ ಹೊರಗಿರುವ ಶತ್ರುಗಳು ಹಾಗೂ ಆಂತರಿಕ ಶತ್ರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿಯನ್ನು ಒತ್ತಾಯಿಸುತ್ತದೆ ಎಂದು ಸುಷ್ಮಿತಾ ದೇವ್ ಹೇಳಿದ್ದಾರೆ. 
ದೇಶದ ಭದ್ರತೆಯ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುವ ಕ್ರಮಗಳಿಗೆ ಕಾಂಗ್ರೆಸ್ ಬೆಂಬಲ ಸೂಚಿಸುತ್ತದೆ ಎಂದು ಸುಷ್ಮಿತಾ ದೇವ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com