ಹಫೀಜ್ ಸಯೀದ್ ವಿರುದ್ಧದ ಸಾಕ್ಷ್ಯಾಧಾರ ಪಾಕಿಸ್ತಾನದ ಬಳಿಯೇ ಇದೆ: ವಿಕಾಸ್ ಸ್ವರೂಪ್

26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಸಾಕ್ಷ್ಯಾಧಾರಗಳು ಪಾಕಿಸ್ತಾನದಲ್ಲಿಯೇ ಇದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವಪೂರ್ ಅವರು ಗುರುವಾರ ಹೇಳಿದ್ದಾರೆ...
ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್
ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್

ನವದೆಹಲಿ: 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಸಾಕ್ಷ್ಯಾಧಾರಗಳು ಪಾಕಿಸ್ತಾನದಲ್ಲಿಯೇ ಇದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಗುರುವಾರ ಹೇಳಿದ್ದಾರೆ.

ಹಫೀಜ್ ಸಯೀದ್ ಗೃಹಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, 26/11 ಮುಂಬೈ ದಾಳಿಯ ಸಂಪೂರ್ಣ ಯೋಜನೆಯನ್ನು ಪಾಕಿಸ್ತಾನದಲ್ಲಿಯೇ ನಡೆಸಲಾಗಿತ್ತು. ದಾಳಿ ನಡೆಸಿದ್ದ ಎಲ್ಲಾ ಉಗ್ರರೂ ಪಾಕಿಸ್ತಾನದಿಂದಲೇ ಭಾರತಕ್ಕೆ ಬಂದಿದ್ದರು. ದಾಳಿಗೆ ಸಂಪೂರ್ಣ ಸಹಾಯವನ್ನು ಪಾಕಿಸ್ತಾನದಿಂದಲೇ ಮಾಡಲಾಗಿತ್ತು. ಹೀಗಾಗಿ ಹಫೀಜ್ ಸಯೀದ್ ವಿರುದ್ಧದ ಸಾಕ್ಷ್ಯಾಧಾರಗಳೂ ಕೂಡ ಪಾಕಿಸ್ತಾನದಲ್ಲಿಯೇ ಇದೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಉಗ್ರ ಹಫೀಜ್ ಸಯೀದ್ ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿತ್ತು. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಭಾರತ, ಮುಂಬೈ ದಾಳಿ ರೂವಾರಿ, ಪಾಕಿಸ್ತಾನದ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ರನ್ನು ಗೃಹಬಂಧನದಲ್ಲಿ ಇಡಲಾಗಿದೆ ಎಂದು ಪಾಕ್ ಪತ್ರಿಕೆಗಳಲ್ಲಿ ವರದಿಯಾಗಿದ್ದು ಇದು ನಂಬಲು ಸಾಧ್ಯವಿಲ್ಲ. ಈ ಸಂಬಂಧ  ಪಾಕಿಸ್ತಾನ ಸರ್ಕಾರ ಪೂರಕ ಸಾಕ್ಷ್ಯಾಧಾರ ನೀಡಬೇಕಿದೆ ಎಂದು ಹೇಳಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ, ಹಫೀಜ್ ಸಯೀದ್ ಗೃಹ ಬಂಧನವನ್ನು ನಂಬಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ. ನಮಗೆ ನವದೆಹಲಿಯ ದೃಢೀಕರಣದ ಅಗತ್ಯವಿಲ್ಲ. ಸಮರ್ಥನೆ ನೀಡುವ ಅಗತ್ಯವೂ ನಮಗಿಲ್ಲ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ 1267 ಅಡಿಯಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದೇವೆ. ಭಾರತ ತನ್ನ ರಾಜಕೀಯ ಉದ್ದೇಶಗಳಿಗಾಗಿ ಹಫೀಜ್ ಸಯೀದ್ ನನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ. ಪಾಕಿಸ್ತಾನ ಪ್ರಜಾಪ್ರಭುತ್ವ ರಾಷ್ಟ್ರವೆಂಬುದನ್ನು ಅಂತರಾಷ್ಟ್ರೀಯ ಸಮುದಾಯ ಅರ್ಥ ಮಾಡಿಕೊಳ್ಳಬೇಕಿದೆ. ಪಾಕಿಸ್ತಾನ ನ್ಯಾಯಾಂಗ ಸ್ವತಂತ್ರ ಹಾಗೂ ಪಾರದರ್ಶಕತೆಯಿಂದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಹಫೀಜ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿರುವುದೇ ಆದರೆ, ಭಾರತ ಮುಂದೆ ಬರಬೇಕಿದೆ. ವಿಚಾರಣೆ ಬಳಿಕ ನ್ಯಾಯಾಲಯ ಆದೇಶ ಹೊರಡಿಸುತ್ತದೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com