ಮತ ಹಾಕದವರಿಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿಲ್ಲ: ಸುಪ್ರೀಂಕೋರ್ಟ್

ಚುನಾವಣೆಗಳಲ್ಲಿ ಮತ ಹಾಕದವರಿಗೆ ಸರ್ಕಾರ ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ..
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಚುನಾವಣೆಗಳಲ್ಲಿ ಮತ ಹಾಕದವರಿಗೆ ಸರ್ಕಾರ ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಒತ್ತುವರಿ ತೆರವಿಗೆ ದೇಶದಾದ್ಯಂತ ಅನ್ವಯವಾಗುವಂತಹ ಆದೇಶ ಹೊರಡಿಸಬೇಕೆಂದು 'ವಾಯ್ಸ್ ಆಫ್ ಇಂಡಿಯಾ ಎನ್'ಜಿಒದ ಧನೇಶ್ ಲೆಶ್ ಧನ್ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಕುರಿತ ವಿಚಾರಣೆ ವೇಳೆ ಸ್ವತಃ ಧನೇಶ್ ಅವರೇ ವಾದ ಮಂಡಿಸಿದ್ದರು. ಸರ್ಕಾರಗಳು ಒತ್ತವರಿ ತೆರವಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ವೇಳೆ ಧನೇಶ್ ಅವರಿಗೆ 'ನೀವು ಮತದಾನ ಮಾಡಿದ್ದೀರೋ? ಇಲ್ಲವೋ?' ಎಂದು ಸಿಜೈ ಜೆ.ಎಸ್ ಖೇಹರ್ ಮತ್ತು ನ್ಯಾಯಮೂರ್ತಿಗಳಾದ ಎನ್.ವಿ. ರಮಣ ಹಾಗೂ ಡಿ.ವೈ. ಚಂದ್ರಚೂಡ ಅವರಿದ್ದ ನೇತೃತ್ವದ ಪೀಠ ಪ್ರಶ್ನಿಸಿತು.

ಈ ವೇಳೆ ಮಾತನಾಡಿದ ಧನೇಶ್ ಅವರು ಸತ್ಯ ಹೇಳುತ್ತೇನೆ. ಜೀವನದಲ್ಲಿ ಎಂದಿಗೂ ನಾನು ಮತದಾನ ಮಾಡಿದವ ನಾನಲ್ಲ' ಎಂದು ಹೇಳಿದರು. ನಂತರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಮತ ಹಾಕದವರಿಗೆ ಸರ್ಕಾರವನ್ನು ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ದೇಶದಲ್ಲಿ ಆಗಿರುವ ಎಲ್ಲಾ ಅತಿಕ್ರಮಣ ತೆರವಿಗೆ ಸಮಗ್ರ ಆದೇಶ ಹೊರಡಿಸಲು ಸಾಧ್ಯವಿಲ್ಲ. ಅಂತಹ ಆದೇಶ ಹೊರಡಿಸಿದ್ದೇ ಆದರೆ, ಅದು ನ್ಯಾಯಾಲಯ ನಿಂದನೆ ಮತ್ತು ಇತರ ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ದಾಖಲಾಗುತ್ತವೆ. ಆದ್ದರಿಂದ ಈ ವಿಚಾರವನ್ನು ಆಯಾ ರಾಜ್ಯಗಳ ಹೈಕೋರ್ಟ್ ಗಮನಕ್ಕೆ ತರಬೇಕು ಎಂದು ನ್ಯಾಯಪೀಠವು ಅರ್ಜಿದಾರರಿಗೆ ತಿಳಿಸಿತು.

ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸದೇ ಇದ್ದರೆ ನೀವು ಪ್ರಚಾರಕ್ಕಾಗಿ ಇಂತಹ ಅರ್ಜಿಯನ್ನು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದೀರಿ ಎಂದು ಭಾವಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com