ಉತ್ತರಪ್ರದೇಶದಲ್ಲಿ 3 ಎಂಎಲ್‍ಸಿ ಸೀಟುಗಳನ್ನು ಗೆದ್ದ ಬಿಜೆಪಿ

ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಈ ಮಧ್ಯೆ ಬಿಜೆಪಿ ಮೂರು ಎಂಎಲ್‍ಸಿ ಸೀಟುಗಳನ್ನು ಗೆದ್ದುಕೊಂಡಿದೆ...
ಬಿಜೆಪಿ
ಬಿಜೆಪಿ
Updated on: 
ಉತ್ತರಪ್ರದೇಶ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಈ ಮಧ್ಯೆ ಬಿಜೆಪಿ ಮೂರು ಎಂಎಲ್‍ಸಿ ಸೀಟುಗಳನ್ನು ಗೆದ್ದುಕೊಂಡಿದೆ. 
ಉತ್ತರಪ್ರದೇಶದ ಕಾನ್ಪುರ, ಗೋರಖ್ಪುರ್, ಬರೇಲಿಯ ಮೂರು ಪದವೀಧರ ಎಂಎಲ್‍ಸಿ ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. 
ಉತ್ತರಪ್ರದೇಶದಲ್ಲಿ ಇಂದು 15 ಜಿಲ್ಲೆಯ 73 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 
ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯುತ್ತಿದ್ದು ಫೆ. 11, 15, 19, 23, 27, ಮಾರ್ಚ್ 4 ಮತ್ತು 8 ರಂದು ಮತದಾನ ನಡೆಯಲಿದ್ದು ಮಾರ್ಚ್ 11 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com