ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವಿಕೆ ಶಶಿಕಲಾಗೆ ಅಡ್ಡಿಯಾಗಿರುವ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಗೆ ಪಕ್ಷದಲ್ಲಿ ಬೆಂಬಲ ಹೆಚ್ಚುತ್ತಿದೆ. ಅಜ್ಞಾತರಾಗಿರುವ ಶಾಸಕರ ಪೈಕಿ ಕೆಲವರು ಶಶಿಕಲಾ ಅವರಿಗೆ ಬೆಂಬಲ ಘೋಷಿಸಿದ್ದರೆ, ಸಂಸದರು ಮಾತ್ರ ಪನ್ನೀರ್ ಸೆಲ್ವಂಗೆ ಬಹಿರಂಗವಾಗಿ ಬೆಂಬಲ ಸೂಚಿಸುತ್ತಿದ್ದಾರೆ.
ಪನ್ನೀರ್ ಸೆಲ್ವಂಗೆ ಫೆ.12 ರಂದು 3 ಸಂಸದರು ಬೆಂಬಲ ಘೋಷಿಸಿದ್ದು, ಸೆಲ್ವಂ ಬೆಂಬಲಿಗ ಸಂಸದರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ವೆಲ್ಲೂರು ಸಂಸದ ಸೆಂಗುಟ್ಟುವನ್ ಟುಟಿಕಾರನ್ ಸಂಸದ ಜೆ.ಜೆಯಸಿಂಗ್ ಪನ್ನೀರ್ ಸೆಲ್ವಂ ಗೆ ಬೆಂಬಲ ಘೋಷಿಸಿದ್ದಾರೆ. ಇನ್ನು ತಿರುವಣ್ಣಾ ಮಲೈ ಸಂಸದೆ ವನರೋಜಾ ಸಹ ಪನ್ನೀರ್ ಸೆಲ್ವಂ ಗೆ ಬೆಂಬಲ ನೀಡಿದ್ದರೆ.
ಪನ್ನೀರ್ ಸೆಲ್ವಂ ಗೆ ಸಂಸದರ ಬೆಂಬಲ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಇತ್ತೀಚಿನ ವರದಿಯ ಪ್ರಕಾರ ತಿರುವಣ್ಣಾ ಮಲೈ ನ ಎಐಎಡಿಎಂಕೆ ನಾಯಕನನ್ನು ಹತ್ಯೆ ಮಾಡಿರುವ ಬಗ್ಗೆ ವರದಿಗಳು ಪ್ರಕಟವಾಗುತ್ತಿವೆ.
ಪನ್ನೀರ್ ಸೆಲ್ವಂ ಗೆ ಬೆಂಬಲ ಘೋಷಿಸಿರುವ ಸಂಸದರು: ನಮಕ್ಕಲ್ ಸಂಸದ ಪಿಆರ್ ಸುಂದರಂ, ಕೃಷ್ಣಗಿರಿ ಸಂಸದ ಕೆ ಅಶೋಕ್ ಕುಮಾರ್, ತಿರುವಣ್ಣಾಮಲೈ ಸಂಸದೆ ವನರೋಜಾ, ತಿರುಪ್ಪುರ್ ಸಂಸದೆ ಸತ್ಯಭಾಮ, ಟುಟಿಕಾರನ್ ಸಂಸದ ಜೆ.ಜೆಯಸಿಂಗ್, ವೆಲ್ಲೂರು ಸಂಸದ ಸೆಂಗುಟ್ಟುವನ್
ಇದು ಸಂಸದರ ಕತೆಯಾದರೆ ಶಶಿಕಲಾ ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸುತ್ತಿದ್ದ ತಮಿಳುನಾಡು ಶಾಸಕ, ಶಾಲಾ ಶಿಕ್ಷಣ ಸಚಿವ ಕೆ ಪಾಂಡಿಯರಾಜನ್ ಸೇರಿದಂತೆ ಹಲವು ಶಾಸಕರು ಪನ್ನೀರ್ ಸೆಲ್ವಂ ಗೆ ಬೆಂಬಲ ಘೋಶಿಸಿದ್ದಾರೆ.