

ನವದೆಹಲಿ: ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಹೊಸ ಪಕ್ಷವನ್ನು ಸ್ಥಾಪನೆ ಮಾಡುತ್ತಿರುವ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಶರ್ಮಿಳಾ ಅವರಿಗೆ ರೂ.50 ಸಾವಿರ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಇರೋಮ್ ಶರ್ಮಿಳಾ ಅವರು ಸ್ಥಾಪನೆ ಮಾಡಿರುವ ಜನತಾ ಪುನರುಜ್ಜೀವನ ಮತ್ತು ನ್ಯಾಯ ಮೈತ್ರಿಕೂಟ ಪಕ್ಷಕ್ಕೆ ಕೇಜ್ರಿವಾಲ್ ಅವರು ರೂ. 50,000 ಹಣವನ್ನು ದೇಣಿಗೆಯಾಗಿ ನೀಡಿದ್ದು, ಇರೋಮ್ ಶರ್ಮಿಳಾ ಅವರಿಗೆ ಜನರು ಔದಾರ್ಯಯುತ ಮನಸ್ಸಿನಿಂದ ದೇಣಿಗೆಯನ್ನು ನೀಡಬೇಕೆಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಇರೋಮ್ ಸರ್ಮಿಳಾ ಅವರ ನೂತನ ಪಕ್ಷಕ್ಕಾಗಿ ನಾನು ರೂ,50,000 ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ಈಮೂಲಕ ಪ್ರತೀಯೊಬ್ಬರೂ ಶರ್ಮಿಳಾ ಅವರಿಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.