ಇಸಿಸ್ ಭಾರತಕ್ಕೆ ಸವಾಲಾಗಲು ಬಿಡುವುದಿಲ್ಲ: ರಾಜನಾಥ ಸಿಂಗ್

ಇಸಿಸ್ ಉಗ್ರ ಸಂಘಟನೆ ಭಾರತಕ್ಕೆ ಸವಾಲಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಹೇಳಿದ್ದಾರೆ...
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
Updated on: 
ನವದೆಹಲಿ: ಇಸಿಸ್ ಉಗ್ರ ಸಂಘಟನೆ ಭಾರತಕ್ಕೆ ಸವಾಲಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಹೇಳಿದ್ದಾರೆ. 
ರಾಜಧಾನಿ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಇಸಿಸ್) ಉಗ್ರ ಸಂಘಟನೆ ಭಾರತಕ್ಕೆ ಸವಾಲಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎದು ಹೇಳಿದ್ದಾರೆ. 
ಗುಜರಾತ್ ನಲ್ಲಿ ಬಾಂಬ್ ಸ್ಫೋಟ ನಡೆಸಲು ಭಾರೀ ಸಂಚು ರೂಪಿಸಿದ್ದ ಇಬ್ಬರು ಇಸಿಸ್ ಉಗ್ರರನ್ನು ನಿನ್ನೆಯಷ್ಟೇ ಬಂಧನಕ್ಕೊಳಪಡಿಸಲಾಗಿತ್ತು. ಗುಜರಾತ್ ನ ಧಾರ್ಮಿಕ ಕ್ಷೇತ್ರಗಳನ್ನೇ ಗುರಿ ಮಾಡಿಕೊಂಡಿದ್ದ ಉಗ್ರರು ದಾಳಿ ನಡೆಸಲು ಭಾರೀ ಸಂಚು ರೂಪಿಸಿದ್ದರು. 
ಬಂಧಿತ ಉಗ್ರರು ಸಹೋದರರಾಗಿದ್ದು, ಇಸಿಸ್ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಗುಜರಾತ್ ನ ಚೊಟಿಲಾ ಮಂದಿರ ಮೇಲೆ ದಾಳಿ ನಡೆಸಲು ಉಗ್ರರ ಯೋಜನೆ ರೂಪಿಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಇಬ್ಬರ ಬಂಧಿಸಲು ಗುಜರಾತ್ ಉಗ್ರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆ ನಿನ್ನೆ ಯಶಸ್ವಿಯಾಗಿದ್ದು, ಇಬ್ಬರು ಉಗ್ರರನ್ನು ಬಂಧಿಸಿ ಅವರ ಬಳಿಯಿದ್ದ ಸ್ಫೋಟಕ ವಸ್ತು ಹಾಗೂ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು. 
ವಾಸೀಮ್ ಹಾಗೂ ನಯೀಮ್ ರಾಮೊದಿಯಾ ಬಂಧಿತ ಉಗ್ರರಾಗಿದ್ದು ಇಬ್ಬರೂ ಸಹೋದರರಾಗಿದ್ದರು. ವಾಸೀಮ್ ನನ್ನು ರಾಜ್ಕೋಟ್ ನಲ್ಲಿ ಬಂಧಿಸಲಾಗಿತ್ತು. ನಯೀಮ್ ನನ್ನು ಭವನಗರದಲ್ಲಿ ಬಂಧಿಸಲಾಗಿತ್ತು ಎಂದು ಉನ್ನತ ಪೊಲೀಸ್ ಅಧಿಕಾರಿ ಕೆ.ಕೆ. ಪಟೇಲ್ ಅವರು ಹೇಳಿದ್ದಾರೆ. 
ಇನ್ನೆರಡು ದಿನಗಳಲ್ಲಿ ಸ್ಫೋಟ ನಡೆಸಲು ಇಬ್ಬರು ಉಗ್ರರು ಸಂಚು ರೂಪಿಸಿದ್ದರು. ಉಗ್ರರ ಬಂಧನದಿಂದ ದೊಡ್ಡ ಮಟ್ಟದ ದಾಳಿಯೊಂದು ತಪ್ಪಿದಂತಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com