ಸೈಕಲ್ ಚಿಹ್ನೆಗೆ ನಿರ್ಬಂಧ ಸಾಧ್ಯತೆ: ಚುನಾವಣಾ ಆಯೋಗದ ಮಾಜಿ ಆಯುಕ್ತ

ಸಮಾಜವಾದಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಉಂಟಾಗಿ ಪಕ್ಷದ ಚಿಹ್ನೆಗಾಗಿ ಎರಡು ಬಣಗಳು ಕಿತ್ತಾಡುತ್ತಿರುವ ಹಿನ್ನೆಲೆಯಲ್ಲಿ ಸೈಕಲ್ ಚಿಹ್ನೆಯನ್ನು ಯಾರಿಗೂ ನೀಡದೇ ನಿರ್ವಂಧಿಸುವ ಸಾಧ್ಯತೆ ಇದೆ
ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್
ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್
Updated on: 
ನವದೆಹಲಿ: ಸಮಾಜವಾದಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಉಂಟಾಗಿ ಪಕ್ಷದ ಚಿಹ್ನೆಗಾಗಿ ಎರಡು ಬಣಗಳು ಕಿತ್ತಾಡುತ್ತಿರುವ ಹಿನ್ನೆಲೆಯಲ್ಲಿ ಸೈಕಲ್ ಚಿಹ್ನೆಯನ್ನು ಯಾರಿಗೂ ನೀಡದೇ ನಿರ್ವಂಧಿಸುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್ ವೈ ಖುರೇಷಿ ಹೇಳಿದ್ದಾರೆ. 
ಸೈಕಲ್ ಪಕ್ಷದ ಚಿಹ್ನೆ ಪಡೆಯಲು ಎರಡೂ ಬಣಗಳು ದಾಖಲೆಗಳನ್ನು ಒದಗಿಸುತ್ತವೆ. ದಾಖಲೆಗಳ ಪರಿಶೀಲನೆಗೆ 4-5 ತಿಂಗಳು ಕಾಲಾವಕಾಶ ಬೇಕಿದ್ದು, ಚುನಾವಣೆಗೂ ಮುನ್ನ ಇತ್ಯರ್ಥವಾಗುದು ಕಷ್ಟ ಸಾಧ್ಯ ಎಂದು ಖುರೇಷಿ ಅಭಿಪ್ರಾಯಪಟ್ಟಿದ್ದಾರೆ. 
ಚಿಹ್ನೆ ಪಡೆಯಲು ಎರಡು ಬಣಗಳ ನಡುವೆ ಪೈಪೋಟಿ ನಡೆದರೆ ಈಗಿರುವ ಸೈಕಲ್ ಚಿಹ್ನೆಗೆ ನಿರ್ಬಂಧ ವಿಧಿಸಿ ಸಮಾಜವಾದಿ ಪಕ್ಷಕ್ಕೆ ತಾತ್ಕಾಲಿಕ ಚಿಹ್ನೆ ನೀಡಲಾಗುತ್ತದೆ ಎಂದು ಖುರೇಷಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com