ಒಡಿಶಾದಲ್ಲಿ ಅಪಘಾತ: ಐವರು ಸಾವು, 30 ಮಂದಿಗೆ ಗಾಯ

ಒಡಿಶಾದ ಪುರಿಯಿಂದ ವಾಪಸ್ ಆಗುತ್ತಿದ್ದ ಬಸ್ ವೊಂದು ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಟ್ರೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೌರಾ: ಒಡಿಶಾದ ಪುರಿಯಿಂದ ವಾಪಸ್ ಆಗುತ್ತಿದ್ದ ಬಸ್ ವೊಂದು ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಟ್ರೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿರುವ ಹಾಗೂ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಹೌರಾ ಜಿಲ್ಲೆಯ ಕಶ್ಯಪುರ್ ದಲ್ಲಿ ನಡೆದಿದೆ.
ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ 40 ವರ್ಷದ ಮಹಿಳೆಯೊಬ್ಬರು ಉಲ್ಬೇರಿಯಾ ಉಪವಿಭಾಗದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಸೋಮವಾರ ಜಗದ್ ಬಲ್ಲಭಪುರ ಜಿಲ್ಲೆಯ 70 ಮಂದಿ ಬಸ್ ನಲ್ಲಿ ಒಡಿಶಾದ ಪುರಿ ದೇವಸ್ಥಾನಕ್ಕೆ ತೆರಳಿದ್ದರು. ಇಂದು ದೇವಸ್ಥಾನದಿಂದ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ 11 ವರ್ಷದ ಮಗು ಹಾಗೂ ಬಸ್ ಸಹಾಯಕ ಸೇರಿದಂತೆ ಐವರು ಮೃತಪಟ್ಟಿದ್ದು, ಘಟನೆಯ ನಂತರ ಚಾಲಕ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com