ಬಿಹಾರ: ಗುಂಡಿಟ್ಟು ಜೆಡಿ(ಯು) ನಾಯಕನ ಬರ್ಬರ ಹತ್ಯೆ

ಜೆಡಿ(ಯು) ಪಕ್ಷದ ನಾಯಕ ಮುಖೇಶ್ ಸಿಂಗ್ ಅವರನ್ನು ದುರ್ಷರ್ಮಿಗಳು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಬಿಹಾರ ರಾಜ್ಯದ ಪಾಟ್ನದಲ್ಲಿ ಭಾನುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಪಾಟ್ನ: ಜೆಡಿ(ಯು) ಪಕ್ಷದ ನಾಯಕ ಮುಖೇಶ್ ಸಿಂಗ್ ಅವರನ್ನು ದುರ್ಷರ್ಮಿಗಳು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಬಿಹಾರ ರಾಜ್ಯದ ಪಾಟ್ನದಲ್ಲಿ ಭಾನುವಾರ ನಡೆದಿದೆ.

ಹತ್ಯೆಯಾದ ಮುಖೇಶ್ ಸಿಂಗ್ ಅವರು ಬರ್ಹ್ ಜಿಲ್ಲಾ ಘಟಕದ ಜೆಡಿ(ಯು) ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇಂದು ಬೆಳಿಗ್ಗೆ ಮುಖೇಶ್ ಅವರನ್ನು ದುಷ್ಕರ್ಮಿಗಳ ಗುಂಪೊಂದು ಪಾಟ್ನದ ಧೇಲ್ವಾ ಗೋಸ್ಸೈ ಪ್ರದೇಶದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.

ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com