ಸಿವಾನ್ ಜೈಲಿನಲ್ಲಿ ಸೆಲ್ಫಿ ತೆಗೆದು ವಿವಾದಕ್ಕೆ ಗುರಿಯಾದ ಆರ್ಜೆಡಿ ಶಾಸಕ ಶಹಾಬುದ್ದೀನ್

ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿಸುವ ಬಿಹಾರದ ಆರ್ಜೆಡಿ ಶಾಸಕ ಮೊಹಮ್ಮದ್ ಶಹಾಬುದ್ದೀನ್ ಜೈಲಿನ ಒಳಗೆ ತೆಗೆದುಕೊಂಡಿರುವ...
ಮೊಹಮ್ಮದ್ ಶಹಾಬುದ್ದೀನ್
ಮೊಹಮ್ಮದ್ ಶಹಾಬುದ್ದೀನ್
Updated on: 

ಪಾಟ್ನಾ: ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿಸುವ ಬಿಹಾರದ ಆರ್ಜೆಡಿ ಶಾಸಕ ಮೊಹಮ್ಮದ್ ಶಹಾಬುದ್ದೀನ್ ಜೈಲಿನ ಒಳಗೆ ತೆಗೆದುಕೊಂಡಿರುವ ಸೆಲ್ಫಿ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸಿವಾನ್ ಜೈಲಿನಲ್ಲಿ ಶಹಾಬುದ್ಧೀನ್ ತೆಗೆದುಕೊಂಡಿರುವ ಸೆಲ್ಫಿಯನ್ನು ಆತನ ಆಪ್ತನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಶಹಾಬುದ್ದೀನ್ ಜೈಲಿನಲ್ಲಿ ಮೊಬೈಲ್ ಬಳಸುತ್ತಿರುವ ಕುರಿತು ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ.

ಶಹಾಬುದ್ದೀನ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಜೈಲು ಅಧಿಕಾರಿಗಳು ಶಹಾಬುದ್ದೀನ್ ಭೇಟಿ ಮಾಡಲು ಬಂದಿದ್ದ ಯಾರೇ ಅವರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರಬಹುದು. ಜೈಲಿನಲ್ಲಿ ಮೊಬೈಲ್ ಬಳಕೆಗೆ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ,

ಅಪಹರಣ, ಕೊಲೆ ಸೇರಿ 36 ಗಂಭೀರ ಪ್ರಕಣಗಳಲ್ಲಿ ಶಹಾಬುದ್ದೀನ್ ವಿರುದ್ಧ ದಾಖಲಾಗಿದ್ದು, ಈತನಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ರದ್ದು ಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com