

ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಆಪ್ತರಾಜ ಶಿವಪಾಲ್ ಯಾದವ್ ಹಾಗೂ ಅಮರ್ ಸಿಂಗ್ ಇಂದು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಪಕ್ಷದ ಚಿಹ್ನೆಯಾದ ಸೈಕಲ್ ಗುರುತನ್ನು ತಮಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮುಲಾಯಂ ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ತೆಗೆದು ಅವರಿಗೆ ಮಾರ್ಗದರ್ಶಕ ಎಂಬ ಹುದ್ದೆ ನೀಡಿ, ತಮ್ಮನ್ನು ಪಕ್ಷ ರಾಷ್ಟ್ರೀಯ ಅಧ್ಯಕ್ಷ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜನವರಿ 1 ರಂದು ಘೋಷಿಸಿಕೊಂಡಿದ್ದರು.
ಎರಡು ಬಣದವರು ಸೈಕಲ್ ಚಿಹ್ನೆಯನ್ನು ತಮಗೆ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ರಾಜ್ಯಸಭೆ ಸದಸ್ಯ ರಾಮ್ ಪಾಲ್ ಯಾದವ್ , ಶಾಸಕರು ಹಾಗೂ ಸಚಿವರು, ಸಂಸದರು ಸೇರಿ ಒಟ್ಟು 5,761 ಮುಖಂಡರ ಬೆಂಬಲವಿದೆ ಎಂದು ಚುನಾವಣಾ ಆಯೋಗಕ್ಕೆ ಪ್ರಮಾಣ ಪತ್ರ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಚುನಾವಣಾ ಆಯೋಗ ಭೇಟಿ ಮಾಡಿದ ಮುಲಾಯಂ ಸಿಂಗ್ ಯಾದವ್ ಬಣ ತಮಗೆ ಸೈಕಲ್ ಚಿಹ್ನೆ ನೀಡಬೇಕೆಂದು ಮನವಿ ಮಾಡಿದ್ದಾರೆ.