ದೇಶ

ಎಸ್ಪಿ 'ಸೈಕಲ್' ಗಾಗಿ ತಂದೆ, ಮಗನ ಕಿತ್ತಾಟ: ಆದೇಶ ಕಾಯ್ದಿರಿಸಿದ ಚು.ಆಯೋಗ

ಸಮಾಜವಾದಿ ಪಕ್ಷದ ‘ಸೈಕಲ್’ ಲಾಂಛನ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್...

ಎಸ್ಪಿ 'ಸೈಕಲ್' ಗಾಗಿ ತಂದೆ, ಮಗನ ಕಿತ್ತಾಟ: ಆದೇಶ ಕಾಯ್ದಿರಿಸಿದ ಚು.ಆಯೋಗ
ಮುಲಾಯಂ ಸಿಂಗ್ ಯಾದವ್ - ಅಖಿಲೇಶ್ ಯಾದವ್
Published On :
ನವದೆಹಲಿ: ಸಮಾಜವಾದಿ ಪಕ್ಷದ ‘ಸೈಕಲ್’ ಲಾಂಛನ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಪುತ್ರ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣಗಳ ಅಹವಾಲು ಆಲಿಸಿದ ಬಳಿಕ ಚುನಾವಣಾ ಆಯೋಗ ಶುಕ್ರವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಉಭಯ ಬಣಗಳು ಇಂದು ಸೈಕಲ್ ಚಿಹ್ನೆ ತಮಗೇ ಸೇರಬೇಕು ಎಂದು ಚುನಾವಣಾ ಆಯೋಗದ ಮುಂದೆ ವಾದಿಸಿದವು.
ವಾದ ಆಲಿಸುವ ಸಲುವಾಗಿ ಚುನಾವಣಾ ಆಯೋಗವು ತಂದೆ-ಮಗನ ಬಣಗಳನ್ನು ಕರೆಸಿಕೊಂಡಿತ್ತು. ಚುನಾವಣಾ ಆಯೋಗದ ಮುಂದೆ ಅಖಿಲೇಶ್ ಯಾದವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಬಹುತೇಕ ಸಂಸತ್ ಸದಸ್ಯರು, ಶಾಸಕರು ಮತ್ತು ಎಸ್​ಪಿ ಪ್ರತಿನಿಧಿಗಳು ಅಖಿಲೇಶ್ ಯಾದವ್ ಜೊತೆಗಿದ್ದು, ಅವರಿಗೆ ಸೈಕಲ್ ಚಿಹ್ನೆ ನೀಡಬೇಕು ಎಂದು ವಾದಿಸಿದರು.
ಪ್ರತಿವಾದ ಮಂಡಿಸಿದ ಮುಲಾಯಂ ಸಿಂಗ್ ಬಣ, ಅಖಿಲೇಶ್ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಸಮಾವೇಶವೇ ಎಸ್​ಪಿ ಸಂವಿಧಾನಕ್ಕೆ ವಿರುದ್ಧ ಎಂದು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.