ಅತ್ಯಾಚಾರ, ಕೊಲೆಗಳಿಗೆ ತುಂಡುಡುಗೆಯೇ ಕಾರಣ: ಟಿಪ್ಪು ಸುಲ್ತಾನ್ ಮಸೀದಿಯ ಮೌಲ್ವಿ ಹೇಳಿಕೆ

ಅತ್ಯಾಚಾರ ಹಾಗೂ ಕೊಲೆಗಳಿಗೆ ತುಂಡುಗೆಯೇ ಕಾರಣವಾಗಿದ್ದು, ಅತ್ಯಾಚಾರಕ್ಕೆ ಒಳಗಾಗಬಾರದು ಎಂದರೆ ಯುವತಿಯರು ತುಂಡುಡುಗೆ ಧರಿಸುವುದನ್ನು ನಿಲ್ಲಿಸಬೇಕೆಂದು ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಸಯೀದ್ ಮೊಹಮ್ಮದ್ ನುರೂರ್ ಆರ್, ಬರ್ಕಾತಿ ಅವರು...
ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಸಯೀದ್ ಮೊಹಮ್ಮದ್ ನುರೂರ್ ಆರ್, ಬರ್ಕಾತಿ
ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಸಯೀದ್ ಮೊಹಮ್ಮದ್ ನುರೂರ್ ಆರ್, ಬರ್ಕಾತಿ

ಕೋಲ್ಕತಾ: ಅತ್ಯಾಚಾರ ಹಾಗೂ ಕೊಲೆಗಳಿಗೆ ತುಂಡುಡುಗೆಯೇ ಕಾರಣವಾಗಿದ್ದು, ಅತ್ಯಾಚಾರಕ್ಕೆ ಒಳಗಾಗಬಾರದು ಎಂದರೆ ಯುವತಿಯರು ತುಂಡುಡುಗೆ ಧರಿಸುವುದನ್ನು ನಿಲ್ಲಿಸಬೇಕೆಂದು ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಸಯೀದ್ ಮೊಹಮ್ಮದ್ ನುರೂರ್ ಆರ್, ಬರ್ಕಾತಿ ಅವರು ಬುಧವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಹೆಣ್ಣು ಮಕ್ಕಳು ತುಂಡುಡುಗೆಯನ್ನು ಧರಿಸುವುದನ್ನು ನೋಡಿದ ಕೂಡಲೇ ಯುವಕರು ಆಕರ್ಷಿತರಾಗುತ್ತಾರೆ. ಹೆಣ್ಣು ಮಕ್ಕಳು ತಾವು ಸುರಕ್ಷಿತರಾಗಿರಬೇಕೆಂದರೆ, ಕೊಲೆ ಹಾಗು ಅತ್ಯಾಚಾರಕ್ಕೊಳಗಾಗಬಾರದು ಎಂಬುದೇ ಅದರೆ, ಮೊದಲು ತುಂಡುಡುಗೆ ಧರಿಸುವುದನ್ನು ಬಿಡಬೇಕೆಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ತುಂಡುಡುಗೆ ಧರಿಸುವುದು ಹೆಚ್ಚಾಗಿ ಹೋಗಿದೆ. ಚಿಕ್ಕಚಿಕ್ಕ ಶರ್ಟ್ ಗಳನ್ನು ಧರಿಸುತ್ತಾರೆ. ತುಂಡುಡುಗೆ ಧರಿಸದಂತೆ ಅವರನ್ನು ನಾವು ನಿಯಂತ್ರಿಸುತ್ತಿಲ್ಲ. ಆದರೆ, ಹೆಣ್ಣು ಮಕ್ಕಳು ತಾವು ಸುರಕ್ಷಿತವಾಗಿರಬೇಕೆಂದರೆ, ತಮ್ಮನ್ನು ರಕ್ಷಿಸಿಕೊಳ್ಳಬೇಕೆಂದರೆ ತುಂಡುಡುಗೆ ಧರಿಸುವುದನ್ನು ನಿಯಂತ್ರಿಸಬೇಕಿದೆ. ಅತ್ಯಾಚಾರ ಹಾಗೂ ಕೊಲೆಗಳಿಗೆ ತುಂಡುಡುಗೆಯೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಜನವರಿ 13 ರಂದೂ ಕೂಡ ಬರ್ಕಾತಿ ಅವರು ಇದೇ ರೀತಿಯ ಹೇಳಿಕೆಯೊಂದನ್ನು ನೀಡಿದ್ದರು. ಮಹಿಳೆಯರು ವಸ್ತ್ರ ಸಂಹಿತೆಯನ್ನು ಪಾಲನೆ ಮಾಡಬೇಕಿದೆ. ಹಿಂದೂಗಳೇ ಆಗಲಿ ಮುಸ್ಲಿಮರೇ ಆಗಲೀ, ದೇಹದ ಮುಚ್ಚಿಕೊಳ್ಳುವಂತೆ ಬಟ್ಟೆಯನ್ನು ಹಾಕಬೇಕು. ಇದು ಹಿಂದೂಸ್ತಾನದ ಸಂಸ್ಕೃತಿ ಎಂದು ಹೇಳಿದ್ದರು.

ಹೊಸ ವರ್ಷಾಚರಣೆ ದಿನದಂದು ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರು, ಲೈಂಗಿಕ ಕಿರುಕುಳಕ್ಕೆ ಮಹಿಳೆಯರ ತುಂಡುಡುಗೆಯೇ ಕಾರಣ. ಆಕರ್ಷಕವಾಗಿ ಕಾಣುವ ಸಲುವಾಗಿ ಮಹಿಳೆಯರು ತುಂಡುಡುಗೆಯನ್ನು ತೊಡುತ್ತಾರೆ. ಇಂತಹ ಮಹಿಳೆಯೇ ಇಂದು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಸ್ವತಃ ನಾವೇ ನಮ್ಮ ಭದ್ರತೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com