ಜಲ್ಲಿಕಟ್ಟು ನಿಷೇಧ ತೀರ್ಪು ವಿರೋಧಿಸಿ ಚೆನ್ನೈ ಮರೀನಾ ಬೀಚ್ ನಲ್ಲಿ ಬೃಹತ್ ಪ್ರತಿಭಟನೆ

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು,...
ಚೆನ್ನೈ ಮರೀನಾ ಬೀಚ್ ನಲ್ಲಿ ವಿದ್ಯಾರ್ಥಿಗಳಿಂದ ಧರಣಿ
ಚೆನ್ನೈ ಮರೀನಾ ಬೀಚ್ ನಲ್ಲಿ ವಿದ್ಯಾರ್ಥಿಗಳಿಂದ ಧರಣಿ

ಚೆನ್ನೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಚೆನ್ನೈನ ಮರೀನಾ ಬೀಚ್ ಇದೀಗ ಪ್ರತಿಭಟನೆಯ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿದೆ.

ಜಲ್ಲಿಕಟ್ಟು ಕ್ರೀಡೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಿನ್ನೆಯಿಂದ ನಡೆಸುತ್ತಿದ್ದ ಪ್ರತಿಭಟನೆ ಟೆಕಿಗಳು ಸಾಥ್ ನೀಡಿದ್ದರು. ಇದೀಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ತಮಿಳುನಾಡಿನ ಖ್ಯಾತ ನಟ-ನಟಿಯರೂ ಕೂಡ ಮರೀನಾ ಬೀಚ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಮಂಗಳವಾರ ಬೆಳಗ್ಗೆ ಕೇವಲ 50 ಮಂದಿ ವಿದ್ಯಾರ್ಥಿಗಳ ತಂಡ ಮರೀನಾ ಬೀಚ್ ನಲ್ಲಿ ಆರಂಭಿಸಿದ ಪ್ರತಿಭಟನೆಯಲ್ಲಿ ಸಮಯ ಕಳೆದಂತೆ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಇದೀಗ ಮರೀನಾ ಬೀಚ್ ನಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರಿದ್ದು, ಈ ಪೈಕಿ ಸಾಫ್ಟ್ ವೇರ್ ಉದ್ಯೋಗಿಗಳು ಹಾಗೂ ಸ್ಥಳೀಯ ವ್ಯಾಪಾರಸ್ಥರೂ ಕೈಜೋಡಿಸಿದ್ದಾರೆ.

ಇನ್ನು ಪ್ರತಿಭಟನೆ ತಮಿಳು ಚಿತ್ರರಂಗದ ಖ್ಯಾತನಾಮರ ಬೆಂಬಲ ಸೂಚಿಸಿರುವುದರೊಂದಿಗೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಖ್ಯಾತ ನಟರಾದ ವಿಜಯ್ ಮತ್ತು ಸೂರ್ಯ ಬೆಂಬಲ ಸೂಚಿಸುವುದರೊಂದಿಗೆ ಅವರ ಸಾವಿರಾರು ಅಭಿಮಾನಿಗಳು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಜಲ್ಲಿಕಟ್ಟು ಕ್ರೀಡೆ ಅವಕಾಶ ನೀಡಿ ಪೇಟಾ ಸಂಘಟನೆಯನ್ನು ನಿಷೇಧಿಸಿದರಷ್ಟೇ ತಾವು ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ತಮಿಳುನಾಡಿನ ಎಲ್ಲ ಸುದ್ದಿವಾಹಿನಿಗಳು ಪ್ರತಿಭಟನೆ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದರಿಂದ ಈ ಸುದ್ದಿ ಇದೀಗ ರಾಷ್ಟ್ರೀಯ ಸುದ್ದಿಯಾಗಿ ಮಾರ್ಪಟ್ಟಿದೆ.

ಜಲ್ಲಿಕಟ್ಟು ಬೆಂಬಲಿಸಿ ಚೆನ್ನೈ ಮರೀನಾ ಬೀಚ್ ನಲ್ಲಿ ವಿದ್ಯಾರ್ಥಿಗಳಿಂದ ಅಹೋ ರಾತ್ರಿ ಧರಣಿ!
ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಚೆನ್ನೈನ ಮರೀನಾ ಬೀಚ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸಿದರು.

ಸುಮಾರು 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನಿನ್ನೆಯಿಂದ ನಿರಂತರ ಧರಣಿ ನಡೆಸುತ್ತಿದ್ದು, ಜಲ್ಲಿಕಟ್ಟು ಕ್ರೀಡೆ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಜಲ್ಲಿಕಟ್ಟು ಸುಮಾರು 500 ವರ್ಷಗಳಿಂದ  ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಅದೊಂದು ಐತಿಹಾಸಿಕ ಕ್ರೀಡೆ. ಗೂಳಿಗಳನ್ನು ನಾವು ದೇವರಂತೆ ಪೂಜಿಸುತ್ತೇವೆಯೇ ಹೊರತು ಅವುಗಳಿಗೆ ಹಾನಿ ಮಾಡುವುದಿಲ್ಲ. ಹೀಗಾಗಿ ಜಲ್ಲಿಕಟ್ಟು ಮೇಲಿನ ನಿಷೇಧವನ್ನು  ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಅಂತೆಯೇ ಜಲ್ಲಿಕಟ್ಟು ಆಚರಣೆಗೆ ತೊಡಕಾಗಿರುವ "ಪೇಟಾ" ಪ್ರಾಣಿ ಸಂರಕ್ಷಣಾ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಮರೀನಾ ಬೀಚ್ ನಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಟೆಕಿಗಳು, ವ್ಯಾಪಾರಸ್ಥರು ಹಾಗೂ ಹಿರಿಯ ನಾಗರಿಕರು ಸಾಥ್ ನೀಡಿದ್ದಾರೆ. ಕೇವಲ ಮರೀನಾ ಬೀಚ್ ನಲ್ಲಿ  ಮಾತ್ರವಲ್ಲದೇ ಮಧುರೈನ ಅಲಂಗನಲ್ಲೂರ್ ನಲ್ಲೂ ಪ್ರತಿಭಟನೆ ನಡೆಸಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸುಮಾರು 200ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಂಗಲ್ ಹಬ್ಬದ ನಿಮಿತ್ತ ನಡೆಯಬೇಕಿದ್ದ ಜಲ್ಲಿಕಟ್ಟು ಆಚರಣೆ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಸ್ಥಗಿತವಾಗಿತ್ತು. ಹೀಗಾಗಿ ಕಳೆದ ಐದು ದಿನಗಳಿಂದ ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಬೇಕು ಎಂದು  ತಮಿಳುನಾಡಿನಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com