

ಲಕ್ನೋ: ಶಿವಪಾಲ್ ಯಾದವ್ ಉಚ್ಚಾಟಿಸಿದ್ದ ಅಖಿಲೇಶ್ ಯಾದವ್ ಬೆಂಬಲಿಗರು ಸಮಾಜವಾದಿ ಪಕ್ಷಕ್ಕೆ ಮರಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತೆಗೆದು ಕೊಂಡ ಬಹುದೊಡ್ಡ ನಿರ್ಧಾರ ಇದಾಗಿದೆ.
ಎಂಎಲ್ ಸಿ ಗಳು ಸೇರಿದಂತೆ ಒಟ್ಟು9 ಮಂದಿ ಅಖಿಲೇಶ್ ಅವರ ನಿಷ್ಠಾವಂತ ಕಾರ್ಯಕರ್ತರನ್ನು ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ ಪಕ್ಷದಿಂದ ಕಿತ್ತು ಹಾಕಿದ್ದರು.
ಕಳೆದ ರಾತ್ರಿಯಿಂದ ಜಾರಿಗೆ ಬರುವಂತೆ ಅವರ ಮೇಲಿದ್ದ ಉಚ್ಚಾಟನೆ ಶಿಕ್ಷೆಯನ್ನು ರದ್ದು ಪಡಿಸಿರುವ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಶಾಸಕ ಆನಂದ್ ಬಹದುರಿಯಾ, ಸುನಿಲ್ ಸಿಂಗ್, ಸಂಜಯಾ ಲಾತರ್, ಮುಲಾಯಂ ಯೂತ್ ಬ್ರಿಗೇಡ್ ನ ರಾಷ್ಟ್ರೀಯ ಅಧ್ಯಕ್ಷಗೌರವ್ ದುಬೆ ಮತ್ತು ಮೊಹಮದ್ ಐಬಾದ್ ಸೇರಿದಂತೆ ಒಟ್ಟು 9 ಮಂದಿಯ ಉಚ್ಚಾಟನೆಯನ್ನು ರದ್ದುಗೊಳಿಸಿದ್ದಾರೆ.