ಪರಮಾಣು ಪ್ರಸರಣ ನಿರೋಧ ದಾಖಲೆ ಆಧಾರದಲ್ಲಿ ಎನ್ಎಸ್ ಜಿ ಸದಸ್ಯತ್ವ ಬೇಕು: ಚೀನಾಗೆ ಭಾರತದ ತಪರಾಕಿ

ಭಾರತ ಎನ್ಎಸ್ ಜಿ ಸದಸ್ಯತ್ವಕ್ಕಾಗಿ ಕೇಳುತ್ತಿರುವುದು ಉಡುಗೊರೆಯ ಆಧಾರದಲ್ಲಿ ಅಲ್ಲ. ಪರಮಾಣು ಪ್ರಸರಣ ನಿರೋಧ ದಾಖಲೆಯ ಆಧಾರದಲ್ಲಿ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಭಾರತ-ಚೀನಾ (ಸಾಂಕೇತಿಕ ಚಿತ್ರ)
ಭಾರತ-ಚೀನಾ (ಸಾಂಕೇತಿಕ ಚಿತ್ರ)
ನವದೆಹಲಿ: ಎನ್ಎಸ್ ಜಿ ಸದಸ್ಯತ್ವವನ್ನು ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ನೀಡುವ ಬೀಳ್ಕೊಡುಗೆಯ ಉಡುಗೊರೆಯನ್ನಾಗಿಸಲು ಸಾಧ್ಯವಿಲ್ಲ ಎಂಬ ಚೀನಾದ ಹೇಳಿಕೆಗೆ ಭಾರತ ತೀಷ್ಣ ಪ್ರತಿಕ್ರಿಯೆ ನೀಡಿದ್ದು,  ಭಾರತ ಎನ್ಎಸ್ ಜಿ ಸದಸ್ಯತ್ವಕ್ಕಾಗಿ ಕೇಳುತ್ತಿರುವುದು ಉಡುಗೊರೆಯ ಆಧಾರದಲ್ಲಿ ಅಲ್ಲ. ಪರಮಾಣು ಪ್ರಸರಣ ನಿರೋಧ ದಾಖಲೆಯ ಆಧಾರದಲ್ಲಿ ಎಂದು ವಿದೇಶಾಂಗ ಇಲಾಖೆ ಹೇಳಿದೆ. 
ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ಕೈತಪ್ಪಲು ಚೀನಾ ಕಾರಣ ಎಂದು ಆರೋಪಿಸಿ, ಈ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಬೇಕೆಂದು ಅಭಿಪ್ರಾಯಪಟ್ಟಿತ್ತು. ಅಮೆರಿಕಾದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಚೀನಾ ಎನ್ ಎಸ್ ಜಿ ಸದಸ್ಯತ್ವ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ನೀಡುವ ಉಡುಗೊರೆಯಲ್ಲಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ (ಎನ್ ಪಿಟಿ) ಸಹಿ ಹಾಕಿದ ರಾಷ್ಟ್ರಗಳಿಗೆ ಮಾತ್ರ ನೀಡಲು ಸಾಧ್ಯ ಎಂದು ಹೇಳಿತ್ತು. 
ಈಗ ಚೀನಾ ಹೇಳಿಕೆಗೆ ಭಾರತ ತಿರುಗೇಟು ನೀಡಿದ್ದು, ಭಾರತ ಎನ್ಎಸ್ ಜಿ ಸದಸ್ಯತ್ವವನ್ನು ಉಡುಗೊರೆಯಾಗಿ ಕೇಳುತ್ತಿಲ್ಲ, ಬದಲಾಗಿ ಈ ವರೆಗೂ ನಿರ್ವಹಿಸಿರುವ ಪ್ರಸರಣ ನಿರೋಧ ದಾಖಲೆಯ ಆಧಾರದಲ್ಲಿ ಎನ್ಎಸ್ ಜಿ ಸದಸ್ಯತ್ವ ಕ್ಕಾಗಿ ಆಗ್ರಹಿಸುತ್ತಿದೆ ಎಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com