ಭಾರತದಲ್ಲಿ ಮೊದಲ ಬಾರಿಗೆ ಸಮುದ್ರದಾಳದಲ್ಲಿ ಮದುವೆಯಾದ ಕೇರಳ ಜೋಡಿ

ವಿದೇಶಗಳಲ್ಲಿ ಆಸಗದಲ್ಲಿ ಹಾರಾಡುತ್ತಾ, ನೀರಿನಲ್ಲಿ ಈಜುತ್ತಾ ವಿವಾಹವಾದಂತಹ ಕೆಲವು ನಿದರ್ಶನಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಆದರೆ, ಇದೇ ಮೊದಲ ಬಾರಿಗೆ ಎಂಬಂತೆ ಭಾರತದಲ್ಲೂ ಇಂತಹದ್ದೊಂದು ಅಪರೂಪದ ಮದುವೆಯೊಂದು ನಡೆದಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರ: ವಿದೇಶಗಳಲ್ಲಿ ಆಸಗದಲ್ಲಿ ಹಾರಾಡುತ್ತಾ, ನೀರಿನಲ್ಲಿ ಈಜುತ್ತಾ ವಿವಾಹವಾದಂತಹ ಕೆಲವು ನಿದರ್ಶನಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಆದರೆ, ಇದೇ ಮೊದಲ ಬಾರಿಗೆ ಎಂಬಂತೆ ಭಾರತದಲ್ಲೂ ಇಂತಹದ್ದೊಂದು ಅಪರೂಪದ ಮದುವೆಯೊಂದು ನಡೆದಿದ್ದು, ವಿಶಿಷ್ಟ ಮದುವೆಯೊಂದಕ್ಕೆ ದೇವರ ನಾಡು ಕೇರಳ ಗುರುವಾರ ಸಾಕ್ಷಿಯಾಯಿತು.

ಭಾರತದ ವರನಾಗಿರುವ ನಿಖಿಲ್ ಪವಾರ್ ಹಾಗೂ ಸ್ಲೋವೇಕಿಯಾದ ವಧು ಯೂನಿಯಾ ಪ್ರೋಗ್ರಾನ್ ಎಂಬ ಜೋಡಿ ನಿನ್ನೆ ಸಮುದ್ರದ ಆಳದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಕೋವಲಂ ಕರಾವಳಿಯಲ್ಲಿ ಕಡಲಿಗಿಳಿದ ಜೋಡಿಗಳು ನೀರಿನ ಆಳದಲ್ಲಿಯೇ ಉಂಗುರ ಹಾಗೂ ಚಿಪ್ಪಿನಿಂದ ತಯಾರಿಸಿದ ಹಾರಗಳನ್ನು ಬದಲಿಸಿಕೊಳ್ಳುವ ಮೂಲಕ ವಿವಾಹವಾಗಿದ್ದಾರೆ.

1 ಗಂಟೆಗಳ ಕಾರ ಈ ವಿವಾಹ ಕಾರ್ಯಕ್ರಮ ನಡೆದಿದೆ. ಇದಕ್ಕೆಂದೇ ಸಮುದ್ರದ ಅಡಿಯಲ್ಲಿ ಸಣ್ಣ ಪೋಡಿಯಂವೊಂದನ್ನು ನಿರ್ಮಿಸಲಾಗಿತ್ತು. ಅದರ ಮೇಲೆ ನಿಂತ, ವಿವಾಹ ಪ್ರಕ್ರಿಯೆಯನ್ನು ನಡೆಸಲಾಗಿದೆ. ಮದುವೆ ವೇಳೆ ಕೇಳಲಾಗುವ ಪ್ರಶ್ನೆಗಳನ್ನು ಹೊಂದಿದ್ದ ಮುದ್ರಿತ ಪ್ರತಿಯನ್ನು ವಧು-ವರರಿಗೆ ತೋರಿಸಲಾಗಿತ್ತು. ಇದಕ್ಕೆ ಅವರು ನಮ್ಮ ಒಪ್ಪಿಗೆ ಇದೆ ಎಂದು ಸಂಕೇತ ಸೂಚಿಸಿದ್ದರು ಈ ಮೂಲಕ ವಿವಾಹ ಪ್ರಕ್ರಿಯೆಗಳನ್ನು ಪೂರೈಸಲಾಗಿತ್ತು.

ವಿವಾಹವಾದ ನಂತರ ನೀರಿನಿಂದ ಹೊರಬಂದು ಸಂಸತ ವ್ಯಕ್ತಪಡಿಸಿರುವ ನಿಖಿಲ್, ಸಮುದ್ರದಾಳದಲ್ಲಿ ಮದುವೆಯಾಗುವ ನನ್ನ ಕನಸು ಇಂದು ನನಸಾಯಿತು ಎಂದು ಹೇಳಿದ್ದಾರೆ.

ನಂತರ ಪ್ರತಿಕ್ರಿಯೆ ನೀಡಿರುವ ಯುನಿಕಾ ಅವರು, ಸಮುದ್ರದಾಳದಲ್ಲಿ ನಡೆದ ಮದುವೆ ನಿಜಕ್ಕೂ ಸಂತಸವನ್ನು ತಂದಿತು. ಆದರೆ, ನೀರಿನಲ್ಲಿ ಕೊಚ ಭಯವಾಯಿತು ಎಂದು ಹೇಳಿದ್ದಾರೆ. ದಂಪತಿಗಳು ತಮ್ಮ ಮದುವೆಯನ್ನು ಮಹಾರಾಷ್ಟ್ರದಲ್ಲಿ ನೋಂದಣಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com