ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಅಂತ್ಯಗೊಳಿಸಿರುವ ಶಿವಸೇನೆ, ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ 25 ವರ್ಷ ವ್ಯರ್ಥವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಅಂತ್ಯಗೊಳಿಸಿರುವ ಶಿವಸೇನೆ, ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ 25 ವರ್ಷ ವ್ಯರ್ಥವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸಾಮ್ನಾದಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿರುವ ಶಿವಸೇನೆ, ಹಿಂದುತ್ವ ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗಿ ಶಿವಸೇನೆ ಹೇಳಿದೆ. ತನ್ನ ಜಾತ್ಯಾತೀತತೆಯನ್ನು ತೋರಿಸಿಕೊಳ್ಳಲು, ಮೂಲ ಉದ್ದೇಶಗಳಿಂದ ದೂರ ಸರಿದಿದೆ ಎಂದು ಶಿವಸೇನೆ ಆರೋಪಿಸಿದೆ.
ಹಿಂದುತ್ವ ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಯ ಸಲುವಾಗಿ ಬಿಜೆಪಿಯ ಧೋರಣೆಯನ್ನು ಕಳೆದ 25 ವರ್ಷಗಳಿಂದ ಸಹಿಸಿಕೊಂಡುಬರುತ್ತಿದ್ದೇವೆ. ಆದರೆ ಅವೆಲ್ಲವೂ ಈಗ ವ್ಯರ್ಥವಾಗಿದೆ. 25 ವರ್ಷದ ಹಿಂದೆ ಆಗಬೇಕಿದ್ದದ್ದು ಈಗ ನಡೆದಿದೆ ಎಂದು ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಅಂತ್ಯಗೊಳಿಸಿರುವುದರ ಬಗ್ಗೆ ಹೇಳಿದೆ.