ಆಸ್ಟ್ರೇಲಿಯಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಟ್ಯಾಕ್ಸಿ ಚಾಲಕನ ಬಂಧನ

ಮುಂಬೈನ ಕೊಲಬ ಪ್ರದೇಶದಲ್ಲಿ ಆಸ್ಟ್ರೇಲಿಯಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ಟ್ಯಾಕ್ಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಮುಂಬೈನ ಕೊಲಬ ಪ್ರದೇಶದಲ್ಲಿ ಆಸ್ಟ್ರೇಲಿಯಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ಟ್ಯಾಕ್ಸಿ ಚಾಲಕನನ್ನು ಬಂಧಿಸಿರುವುದಾಗಿ ಶನಿವಾರ ಪೊಲೀಸರು ತಿಳಿಸಿದ್ದಾರೆ.
20 ವರ್ಷದ ಆಸ್ಟ್ರೇಲಿಯಾ ಯುವತಿ ಕಳೆದ ಜನವರಿ 26ರಂದು ಚಾಲಕನ ವಿರುದ್ಧ ದೂರು ದಾಖಲಿಸಿದ್ದರು ಎಂದು ಅವರು ಹೇಳಿದ್ದಾರೆ.
ಸಂತ್ರಸ್ಥ ಯುವತಿ ಶೈಕ್ಷಣಿಕ ಕೋರ್ಸ್ ಗಾಗಿ ವಿದ್ಯಾರ್ಥಿ ವೀಸಾ ಮೇಲೆ ಭಾರತಕ್ಕೆ ಬಂದಿದ್ದು, ಕೊಲಬ ಪ್ರದೇಶದಲ್ಲಿರುವ ಮಹಿಳೆಯರ ಹಾಸ್ಟೇಲ್ ನಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 20ರಂದು ಚಾಲಕ ಜಿಯಾ ಉಲ್ ಅನ್ಸಾರಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಮೈ ಮುಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ವಿದೇಶಿ ಯುವತಿಯ ದೂರಿನ ಆಧಾರದ ಮೇಲೆ ವೊರ್ಲಿ ಡ್ರೈವ್ಸ್ ಟ್ಯಾಕ್ಸಿಯ ಚಾಲಕ ಜಿಯಾ ಉಲ್ ಅನ್ಸಾರಿಯನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com