

ನವದೆಹಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸುತ್ತಿರುವ ಸ್ವಯಂ ಘೋಶಿತ ದೇವಮಾನವ ಅಸಾರಾಂ ಬಾಪುಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಅಸಾರಾಂ ಬಾಪು ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್ ಜಾಮೀನು ಅರ್ಜಿ ಜೊತೆ ಸುಳ್ಳು ವೈದ್ಯಕೀಯ ದಾಖಲೆ ಲಗತ್ತಿಸಿರುವ ಹಿನ್ನೆಲೆಯಲ್ಲಿ ಹೊಸದಾಗಿ ಎಫ್ ಐಆರ್ ದಾಖಲಿಸಿಲು ಸುಪ್ರೀಂಕೋರ್ಟ್ ಸೂಚಿಸಿದೆ.
ಸುಳ್ಳು ದಾಖಲೆ ಲಗತ್ತಿಸಿರುವುದಕ್ಕೆ ಕಿಡಿಕಾರಿರುವ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಲೇಹರ್ 1 ಲಕ್ಷ ರು ದಂಡ ಕಟ್ಟುವಂತೆ ಅಸಾರಾಂ ಬಾಪುಗೆ ಸೂಚಿಸಿದೆ.
ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಅಸಾರಾಂ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ವೈದ್ಯಕೀಯ ವರದಿ ಪೂರ್ಣವಾಗಿಲ್ಲ ಎಂದು ಏಮ್ಸ್ ವೈದ್ಯಕೀಯ ಮಂಡಳಿ ತಿಳಿಸಿದೆ.
ಜೋಧ್ ಪುರ ಕಾರಾಗೃಹ ದ ಜೈಲು ಅಧೀಕ್ಷಕರ ಸಹಿಯನ್ನು ನಕಲು ಮಾಡಿ, ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಅಸಾರಾಂ ಬಾಪು ಸೇರಿದಂತೆ ಆತನಿಗೆ ಸಹಾಯ ಮಾಡಿದವರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕೋರ್ಟ್ ಹೇಳಿದೆ