ಕೋಳಿ ಫಾರ್ಮ್ ನಲ್ಲಿ ಕಳ್ಳರಿಂದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ

ಪಟೌಡಿಯ ಮಂದಾಪುರ ಎಂಬಲ್ಲಿ ಕೋಳಿ ಫಾರ್ಮ್ ಒಳಗೆ ಇಬ್ಬರು ಮಹಿಳೆಯರ ಮೇಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗುರುಗ್ರಾಮ್ (ಹರ್ಯಾಣ): ಪಟೌಡಿಯ ಮಂದಾಪುರ ಎಂಬಲ್ಲಿ ಕೋಳಿ ಫಾರ್ಮ್ ಒಳಗೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ  ನಡೆದಿದೆ.
ನಿನ್ನೆ ರಾತ್ರಿ ಪಟೌಡಿಯ ಕೋಳಿ ಫಾರ್ಮ್ ಮುರಿದು ಒಳ ನುಗ್ಗಿದ ಸುಮಾರು 6 ಮಂದಿ ಅಲ್ಲಿನ 8 ಮಂದಿ ನಿವಾಸಿಗಳನ್ನು ಹಿಡಿದು ಅವರಲ್ಲಿದ್ದ ವಸ್ತುಗಳನ್ನು ದೋಚಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾರೆ.
ತಮ್ಮ ಮುಖಗಳನ್ನು ಬಟ್ಟೆಗಳಿಂದ ಮುಚ್ಚಿದ್ದ ಆರೋಪಿಗಳು ಕೋಳಿ ಫಾರ್ಮ್ ಬಳಿಯ ನಿವಾಸಿಗಳನ್ನು ಅವರ ಕೋಣೆಯಲ್ಲಿ ಕಟ್ಟಿಹಾಕಿ ಥಳಿಸಿದ್ದಾರೆ. ಸುಮಾರು 4 ಗಂಟೆಗಳ ಕಾಲ ಹಲ್ಲೆ ನಡೆಸಿ, ಅತ್ಯಾಚಾರವೆಸಗಿ  ಬೆಳಗ್ಗೆ 4 ಗಂಟೆ ಸುಮಾರಿಗೆ ಪರಾರಿಯಾಗಿದ್ದಾರೆ.
ಪಟೌಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಸೂರರಿಂಟೆಂಡೆಂಟ್ ತನ್ಯಾ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com