ಜೈಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕಮಾತ್ರ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಬಗ್ಗೆಯೇ ಈಗ ಎಲ್ಲಿ ನೋಡಿದರಲ್ಲಿ ಚರ್ಚೆ. ಇದರ ಒಳಿತು ಕೆಡುಕುಗಳ ಬಗ್ಗೆ, ನಿಯಮದ ಬಗ್ಗೆ ಸಾರ್ವಜನಿಕರು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇವುಗಳ ಮಧ್ಯೆ ಇಲ್ಲೊಬ್ಬರು ತಾಯಿ ಅಂದು ಹುಟ್ಟಿದ ತಮ್ಮ ಮಗುವಿಗೆ ಜಿಎಸ್ ಟಿ ಎಂದು ಹೆಸರಿಟ್ಟಿದ್ದಾರೆ.