ನೆರೆ ರಾಷ್ಟ್ರಗಳಿಂದ ಯುದ್ಧದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ಸೇನೆಯನ್ನು ಸಧೃಡಗೊಳಿಸಲು ಮುಂದಾಗಿದ್ದಾರೆ. ಅಂತೆ ಇಸ್ರೇಲ್ ಪ್ರವಾಸ ಕೈಗೊಂಡಿರುವ ಮೋದಿ ಅವರು ಕಣ್ಗಾವಲಿಗಷ್ಟೇ ಅಲ್ಲ, ಯುದ್ಧಕ್ಕೂ ಸಿದ್ಧವಿರುವ 10 ಹೆರೋನ್ ಟಿಪಿ ಡ್ರೋನ್ ಗಳನ್ನು ಖರೀದಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಹಿಂದಿನ ಯುಪಿಎ ಸರ್ಕಾರ ಇಸ್ರೇಲ್ ನ ಪ್ರಬಲ ಹೆರೋನ್ ಟಿಪಿ ಡ್ರೋನ್ ಖರೀದಿಸಲು ಮೀನ-ಮೇಷ ಎಣಿಸುತ್ತಿತ್ತು.