
ಜೆರುಸಲೇಂ: ಇಸ್ರೇಲ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೊಟ್ಟಿದ್ದ ವಸ್ತ್ರ ಇಸ್ರೇಲಿಗರ ಗಮನ ಸೆಳೆದಿದ್ದು, ರಾಜತಾಂತ್ರಿಕವಾಗಿಯೂ ಪ್ರಧಾನಿ ಮೋದಿ ವಸ್ತ್ರ ಸಾಕಷ್ಚು ಸುದ್ದಿಗೆ ಗ್ರಾಸವಾಗಿದೆ.
ವಿಶೇಷವೆಂದರೆ ಇಸ್ರೇಲ್ ದೇಶದ ಧ್ವಜ ಕೂಡ ಬಿಳಿಪು ಮತ್ತು ನೀಲಿ ಬಣ್ಣದ್ದಾಗಿದ್ದು, ಪ್ರಧಾನಿ ಮೋದಿ ತೊಟ್ಟಿದ್ದ ಕೋಟ್ ಕೂಡ ಬಿಳಿ ಮತ್ತು ನೀಲಿ ಬಣ್ಣದಿಂದ ಕೂಡಿತ್ತು. ಬಿಳಿ ಬಣ್ಣದ ಕೋಟ್ ನಲ್ಲಿ ನೀಲಿ ಬಣ್ಣದ ಜೇಬನ್ನು ಹೊಲಿಯಲಾಗಿತ್ತು. ಇದು ಇಸ್ರೇಲ್ ನೊಂದಿಗೆ ಭಾರತವಿದೆ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಇಂತಹ ವಿಶೇಷ ಕೋಟ್ ಧರಿಸಿದ್ದರು ಎಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೋಟ್ ಇದೀಗ ಇಸ್ರೇಲಿಗರ ಗಮನ ಸೆಳೆಯುತ್ತಿದೆ. ಇದೇ ಪ್ರವಾಸದ ವೇಳೆ ಯಾದ್ ವಾಶೇಮ್ ಹೊಲೊಕಾಸ್ಟ್ ಮೆಮೋರಿಯಲ್ ಮ್ಯೂಸಿಯಂಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅಲ್ಲೂ ಕೂಡ ತಮ್ಮ ವಸ್ತ್ರಗಳಿಂದಲೇ ಗಮನಸೆಳೆದೆರು. ಮ್ಯೂಸಿಯಂ ಭೇಟಿ ನೀಡುವ ಪ್ರವಾಸಿಗರು ತಲೆಗೆ ಬಟ್ಟೆ ಹಾಕಿಕೊಳ್ಳುವ ಮೂಲಕ ಗೌರವ ಸಲ್ಲಿಕೆ ಮಾಡುತ್ತಾರೆ. ಆದರೆ ಮ್ಯೂಸಿಯಂಗೆ ವಿಶೇಷ ಅತಿಥಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಅದೇ ರೀತಿಯ ವಸ್ತ್ರ ಸಂಹಿತೆ ಅನುಸರಿಸಿ ಗಮನ ಸೆಳೆದಿದ್ದಾರೆ. ಮ್ಯೂಸಿಯಂ ಪ್ರವೇಶಕ್ಕೂ ಮುನ್ನ ಹಿಮಾಚಲಿ ಕ್ಯಾಪ್ ಧರಿಸಿ ಮ್ಯೂಸಿಯಂ ಪ್ರವೇಶಿಸಿದ್ಗರು. ಇದು ಅಲ್ಲಿಗೆ ಆಗಮಿಸಿದ್ದ ಪ್ರವಾಸಿಗರನ್ನು ಸೆಳೆಯಿತು.
ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ತೊಟ್ಟಿದ್ದ ಕೋಟ್ ಕೂಡ ಭಾರಿ ಸುದ್ದಿಗೆ ಗ್ರಾಸವಾಗಿತ್ತು.
Advertisement