ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಕ್ಕಿಂ ಸೆಕ್ಟರ್ ಬಳಿ ಚೀನಾ ರಸ್ತೆ ನಿರ್ಮಾಣ ಮಾಡಲು ಭಾರತ ಬಿಡುವುದಿಲ್ಲ: ರಕ್ಷಣಾ ತಜ್ಞರು

ಸಿಕ್ಕಿಂ ಸೆಕ್ಟರ್ ಬಳಿ ಚೀನಾ ರಸ್ತೆ ನಿರ್ಮಾಣ ಮಾಡಲು ಭಾರತ ಎಂದಿಗೂ ಬಿಡುವುದಿಲ್ಲ ಎಂದು ರಕ್ಷಣಾ ತಜ್ಞರು ಗುರುವಾರ ಹೇಳಿದ್ದಾರೆ...
ನವದೆಹಲಿ: ಸಿಕ್ಕಿಂ ಸೆಕ್ಟರ್ ಬಳಿ ಚೀನಾ ರಸ್ತೆ ನಿರ್ಮಾಣ ಮಾಡಲು ಭಾರತ ಎಂದಿಗೂ ಬಿಡುವುದಿಲ್ಲ ಎಂದು ರಕ್ಷಣಾ ತಜ್ಞರು ಗುರುವಾರ ಹೇಳಿದ್ದಾರೆ. 
ಇಂಡೋ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಪಿ.ಕೆ. ಸೈಘಲ್ ಅವರು, ವಿವಾದಿತ ಸಿಕ್ಕಿಂ ಸೆಕ್ಟರ್ ಬಳಿ ರಸ್ತೆ ನಿರ್ಮಾಣ ಮಾಡಲು ಭಾರತ ಎಂದಿಗೂ ಬಿಡುವುದಿಲ್ಲ. ತಾನು ತೋಡಿದ್ದ ಗುಂಡಿಯಲ್ಲಿ ತಾನೇ ಬೀಳುತ್ತಿದ್ದೇನೆಂಬುದು ಇದೀಗ ಚೀನಾಗೆ ಮನವರಿಕೆಯಾಗುತ್ತಿದೆ  ಎಂದು ಹೇಳಿದ್ದಾರೆ. 
ಸಿಕ್ಕಿಂ ಗಡಿ ಭಾಗದಲ್ಲಿ ಯಾವುದೇ ಕಾರಣಕ್ಕೂ ಚೀನಾ ರಸ್ತೆ ನಿರ್ಮಾಣ ಮಾಡಲು ಭಾರತ ಬಿಡುವುದಿಲ್ಲ. ಚೀನಾ ತಾನು ತೋಡಿದ ಗುಂಡಿಯಿಂದ ಹೊರ ಬರಲು ಬಿಡುವುದೂ ಇಲ್ಲ. ಆದರೆ, ಅವರನ್ನು ಸುರಕ್ಷಿತವಾಗಿ ಹೊರತರಬಲ್ಲೆವು. ಭಾರತಕ್ಕೆ ಇದನ್ನು ಬಿಟ್ಟರೆ ಬೇರಾವುದೇ ಆಯ್ಕೆಗಳಿಲ್ಲ. ಚೀನಾ ಯಾವುದೇ ಪರಿಸ್ಥಿತಿಯಲ್ಲೂ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. 
ಸಿಕ್ಕಿಂ ವಿವಾದ ಸಂಬಂಧ ಭಾರತ ಜನರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದೆ. ಗಡಿಯಲ್ಲಿ ತನ್ನ ಸೇನೆಯನ್ನು ಭಾರತ ಹಿಂದಕ್ಕೆ ಕರೆಯಲಿಲ್ಲ ಎಂದರೆ, ಯುದ್ಧಕ್ಕೆ ನಾವು ಸಿದ್ಧರಿದ್ದೇವೆಂದು ಚೀನಾ ಈ ಹಿಂದೆ ಬೆದರಿಕೆ ಹಾಕಿತ್ತು. 

Related Stories

No stories found.

Advertisement

X
Kannada Prabha
www.kannadaprabha.com