ಮುಂಬೈ: ಇಲ್ಲಿನ ಉಪ ನಗರ ಚರ್ಕೊಪ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಕಾರಿನಲ್ಲಿ ಕದ್ದೊಯ್ದು ಅತ್ಯಾಚಾರವೆಸಗಿದ ಘಟನೆ ನಿನ್ನೆ ನಡೆದಿದೆ.
ಈ ಘಟನೆ ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ನಡೆದಿದೆ. ಯುವತಿ ಕಾಲೇಜಿಗೆ ಹೋಗುತ್ತಿದ್ದಳು. ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಡೆದುಕೊಂಡು ಹೋಗುತ್ತಿದ್ದ ಯುವತಿ ಬಳಿ ಬಂದು ಅಪಹರಿಸಿ ಕದ್ದೊಯ್ದು ಅತ್ಯಾಚಾರವೆಸಗಿದ್ದಾರೆ.
ಯುವತಿಯನ್ನು ಕಾರಿನೊಳಗೆ ಎಳೆದು ಆರೋಪಿಗಳು ಲೈಂಗಿಕ ಕಿರುಕುಳ ನೀಡಲಾರಂಭಿಸಿದರು. ನಂತರ ಮಲ್ನಾಡ್ ಎಂಬ ದ್ವೀಪ ಪ್ರದೇಶಕ್ಕೆ ಕದ್ದೊಯ್ದು ಅತ್ಯಾಚಾರವೆಸಗಿದ್ದಾರೆ.
ಪೊಲೀಸರು ಯುವತಿಯ ವೈದ್ಯಕೀಯ ಪರೀಕ್ಷೆಯ ವರದಿಗೆ ಕಾಯುತ್ತಿದ್ದು ಅಪಹರಣ ಮತ್ತು ಅತ್ಯಾಚಾರ ಕೇಸು ದಾಖಲಿಸಿದ್ದಾರೆ. ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ.