ಅಮೆರಿಕ ಸೇನಾ ಅರ್ಜಿಯಲ್ಲಿ ಸುಳ್ಳು ಮಾಹಿತಿ: ಭಾರತೀಯ ಮುಸ್ಲಿಂ ಶಿವಂ ಪಟೇಲ್ ಬಂಧನ

ಅಮೆರಿಕ ಸೇನಾ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದ ಆರೋಪದ ಮೇಲೆ ಇಸ್ಲಾಂಗೆ ಮತಾಂತರಗೊಂಡಿದ್ದ ಭಾರತೀಯ ಮೂಲದ ಶಿವಂ ಪಟೇಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ...
ವ್ಯಕ್ತಿ ಬಂಧನ(ಸಂಗ್ರಹ ಚಿತ್ರ)
ವ್ಯಕ್ತಿ ಬಂಧನ(ಸಂಗ್ರಹ ಚಿತ್ರ)
ನ್ಯೂಯಾರ್ಕ್: ಅಮೆರಿಕ ಸೇನಾ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದ ಆರೋಪದ ಮೇಲೆ ಇಸ್ಲಾಂಗೆ ಮತಾಂತರಗೊಂಡಿದ್ದ ಭಾರತೀಯ ಮೂಲದ ಶಿವಂ ಪಟೇಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 
ಸೇನೆ ಸೇರುವ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಶಿವಂ ಪಟೇಲ್ ಗೆ ಐದು ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. 
ನಾರ್ ಫೋಕ್ ನಿವಾಸಿಯಾಗಿರುವ ಶಿವಂ ಪಟೇಲ್ ಅಮೆರಿಕ ಸೇನೆಯನ್ನು ಸೇರುವ ಅರ್ಜಿಯಲ್ಲಿ ತಾನು ಈ ಹಿಂದೆ ಚೀನಾ ಅಥವಾ ಜೋರ್ಡಾನಿಗೆ ಹೋಗಿದ್ದೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. 2011-12ರಲ್ಲಿ ಪೋಷಕರನ್ನು ನೋಡಲು ಭಾರತಕ್ಕೆ ಹೋಗಿದ್ದನ್ನು ಬಿಟ್ಟರೆ ನಾನು ಅಮೆರಿಕದಿಂದ ಹೊರಗೆ ಹೋಗಿದ್ದೇ ಇಲ್ಲ ಎಂದು ಹೇಳಿಕೊಂಡಿದ್ದ. 
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಶಿವಂ 2016ರ ಜುಲೈ ತಿಂಗಳಲ್ಲಿ ಇಂಗ್ಲಿಷ್ ಕಲಿಸಲೆಂದು ಚೀನಾಕ್ಕೆ ಹೋಗಿದ್ದ. ಈ ವೇಳೆ ತನ್ನ ತಂದೆಗೆ ಚೀನಾದಲ್ಲಿ ಮುಸ್ಲಿಂರನ್ನು ಎಷ್ಟು ಕೆಟ್ಟದಾಗಿ ಕಾಣಲಾಗುತ್ತಿದೆ ಎಂಬುದನ್ನು ತಿಳಿಸಿ ಅಸಮಾಧಾನ ವ್ಯಕ್ತಪಡಿಸಿದ್ದ ಎಂದು ಹೇಳಲಾಗಿದೆ. ಈ ಮಧ್ಯೆ ಶಿವಂ ಪಟೇಲ್ ಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮೇಲೆ ಒಲವೆಚ್ಚಾಗಿ ಸಂಘಟನೆ ಸೇರುವ ಮಾರ್ಗೋಪಾಯ ತಿಳಿಯಲು ಆನ್ ಲೈನ್ ಶೋಧ ನಡೆಸಿದ್ದ ಅಲ್ಲದೆ ಇಸಿಸ್ ನಡೆದಿ ಕೆಲ ದಾಳಿಗಳನ್ನು ಆತ ಪ್ರಶಂಸಿಸಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com