ಇದೇ ಅಭಿಪ್ರಾಯ ಹೇಳಿದ ಬಿಜೆಪಿಯ ಮತ್ತೊಬ್ಬ ನಾಯಕ ಸತ್ಯಪಾಲ್ ಸಿಂಗ್, ಕೋಮು ಗಲಭೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಉತ್ತೇಜಿಸುತ್ತಿದ್ದಾರೆ.ಅವರ ನೇತೃತ್ವದ ಸರ್ಕಾರದ ತಪ್ಪು ನೀತಿಗಳಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರು ತಮ್ಮ ಗುರುತನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿ ಸಹಜ ಸ್ಥಿತಿಗೆ ಬಾರದಿದ್ದರೆ ದೇಶಕ್ಕೆ ಒಳ್ಳೆಯದಲ್ಲ. ಬಸಿರ್ಹಾಟ್ ಗೆ ನಮ್ಮನ್ನು ಹೋಗಲು ಬಿಟ್ಟಿಲ್ಲ. ಇದರರ್ಥ ಮಮತಾ ಬ್ಯಾನರ್ಜಿಯವರು ವಾಸ್ತವ ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಅವರು ಕೋಮು ಗುಂಪನ್ನು ಪ್ರಚೋದಿಸುತ್ತಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದರು.