ನವದೆಹಲಿ: ಗಂಗಾ ನದಿಯಲ್ಲಿ ತ್ಯಾಜ್ಯ ಹಾಕುವವರಿಗೆ 50,000 ರೂಪಾಯಿ ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಆದೇಶ ನೀಡಿದೆ.
ಉತ್ತರಾಖಂಡ್ ಹಾಗೂ ಉನ್ನಾವ್ ನಡುವೆ ಗಂಗಾ ನದಿಯಲ್ಲಿ ತ್ಯಾಜ್ಯ ಹಾಕುವವ ಸಂಸ್ಥೆಗಳು, ವ್ಯಕ್ತಿಗಳಿಗೆ 50 ಸಾವಿರ ರೂಪಾಯಿ ದಂಡ ಹಾಕಬೇಕು ಹಾಗೂ ಗಂಗಾ ನದಿಯ 500 ಮೀಟರ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸುರಿಯ್ತುವುದಕ್ಕೆ ಅವಕಾಶ ನೀಡಬಾರದು ಎಂದು ಆದೇಶ ನೀಡಿದೆ. ಜೊತೆಗೆ 100 ಮೀಟರ್ ಗಳ ವ್ಯಾಪ್ತಿಯನ್ನು ಶೂನ್ಯ ಅಭಿವೃದ್ಧಿ ಪ್ರದೇಶ (no-development zone) ಎಂದು ಗುರುತಿಸಬೇಕೆಂದು ನ್ಯಾ.ಸ್ವತಂತ್ರ ಕುಮಾರ್ ಅವರಿದ್ದ ಎನ್ ಜಿ ಟಿ ಪೀಠ ಆದೇಶ ನೀಡಿದೆ.
ಕೇಂದ್ರ ಸರ್ಕಾರ ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಕ್ಕಾಗಿ 20,000 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದಿರುವ ಎನ್ ಜಿ ಟಿ, ತಾನು ನೀಡಿರುವ ನಿರ್ದೇಶನಗಳ ಪಾಲನೆಯಾಗುತ್ತಿರುವ ಬಗ್ಗೆ ಗಮನ ಹರಿಸಲು ಸಮಿತಿ ರಚಿಸಿ, ಸಮಿತಿಗೆ ವರದಿ ನೀಡುವಂತೆ ಸೂಚನೆ ನೀಡಿದೆ.