ಜು.15 ರಂದು ಅಮರನಾಥ ಯಾತ್ರೆಗೆ ತೆರಳಿದ 3 ಸಾವಿರಕ್ಕೂ ಹೆಚ್ಚು ಜನರ ತಂಡ

ಜೂ.15 ರಂದು 3,300 ಜನಗಳ ಮೊತ್ತೊಂದು ಯಾತ್ರಾರ್ಥಿಗಳ ತಂಡ ಅಮರನಾಥ ಯಾತ್ರೆಗೆ ತೆರಳಿದೆ.
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ
Updated on: 
ಜಮ್ಮು: ಜೂ.15 ರಂದು 3,300 ಜನಗಳ ಮೊತ್ತೊಂದು ಯಾತ್ರಾರ್ಥಿಗಳ ತಂಡ ಅಮರನಾಥ ಯಾತ್ರೆಗೆ ತೆರಳಿದೆ.
ಬೆಳಿಗ್ಗೆ ಸುಮಾರು 3:30 ಕ್ಕೆ 132 ಭದ್ರತಾ ಪಡೆಗಳ ವಾಹನಗಳೊಂದಿಗೆ 3,398 ಯಾತ್ರಾರ್ಥಿಗಳು ಅಮರನಾಥ ಯಾತ್ರೆಗೆ ತಲುಪಿದ್ದು, 16 ನೇ ದಿನದ ಯಾತ್ರೆಯಲ್ಲಿ 10,000 ಯಾತ್ರಾರ್ಥಿಗಳು ಅಮರನಾಥದ ಹಿಮ ಗುಹೆಯಲ್ಲಿನ ಶಿವಲಿಂಗವನ್ನು ದರ್ಶನ ಮಾಡಿದ್ದಾರೆ. 
ಜೂ.29 ರಂದು ಪ್ರಾರಂಭವಾದ ಅಮರನಾಥ ಯಾತ್ರೆಗೆ ಈ ವರೆಗೂ 2 ಲಕ್ಷ ಯಾತ್ರಾರ್ಥಿಗಳು ತೆರಳಿದ್ದಾರೆ. ಜು.10 ರಂದು ನಡೆದ ಭಯೋತ್ಪಾದಕ ದಾಳಿಯ ಹೊರತಾಗಿಯೂ ಅಮರನಾಥ ಯಾತ್ರೆ ಮುಂದುವರೆದಿದ್ದು,  ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com