ಡೋಕ್ಲಾಮ್, ಕಾಶ್ಮೀರ ವಿವಾದ: 2ನೇ ದಿನವೂ ವಿಪಕ್ಷಗಳಿಗೆ ವಿವರಣೆ ನೀಡಿದ ಸರ್ಕಾರ

ಡೋಕ್ಲಾಮ್ ಗಡಿ ವಿವಾದ ಹಾಗೂ ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿ ಕುರಿತಂತೆ ಕರೆಯಲಾಗಿದ್ದ ಸಭೆಯಲ್ಲಿ ಗೈರಾಗಿದ್ದ ವಿಪಕ್ಷಗಳ ನಾಯಕರಿಗೆ ಮತ್ತೆ ಸಭೆ ಕರೆದ ಕೇಂದ್ರ ಸರ್ಕಾರದ ವಿವರಣೆ ನೀಡಿದೆ ಎಂದು ಭಾನುವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಡೋಕ್ಲಾಮ್ ಗಡಿ ವಿವಾದ ಹಾಗೂ ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿ ಕುರಿತಂತೆ ಕರೆಯಲಾಗಿದ್ದ ಸಭೆಯಲ್ಲಿ ಗೈರಾಗಿದ್ದ ವಿಪಕ್ಷಗಳ ನಾಯಕರಿಗೆ ಮತ್ತೆ ಸಭೆ ಕರೆದ ಕೇಂದ್ರ ಸರ್ಕಾರದ ವಿವರಣೆ ನೀಡಿದೆ ಎಂದು ಭಾನುವಾರ ತಿಳಿದುಬಂದಿದೆ.
ಈ ಕುರಿತಂತೆ ಕೇಂದ್ರ ಸರ್ಕಾರದ ವಕ್ತಾರ ಪ್ರತಿಕ್ರಿಯೆ ನೀಡಿದ್ದು, ಡೋಕ್ಲಾಮ್ ವಿವಾದ ಹಾಗೂ ಕಾಷ್ಮೀರ ವಿಚಾರ ಕುರಿತಂತೆ ಶುಕ್ರವಾರ ಕರೆಯಲಾಗಿದ್ದ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ ಸಿಂಗ್, ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು 14 ವಿರೋಧ ಪಕ್ಷಗಳ ನಾಯಕರಿಗೆ ವಿವರಣೆ ನೀಡಿದ್ದರು. ಅಂದಿನ ಸಭೆಯಲ್ಲಿ ಗೈರಾಗಿದ್ದ ಮತ್ತಿತರೆ ವಿಪಕ್ಷಗಳ ನಾಯಕರಿಗೆ ಶನಿವಾರ ಮತ್ತೆ ಸಭೆ ನಡೆಸಿ ಎರಡನೇ ದಿನವೂ ವಿವರಣೆ ನೀಡಲಾಯಿತು ಎಂದು ಹೇಳಿದ್ದಾರೆ. 

ಶುಕ್ರವಾರ ನಡೆದ ಸಭೆಯಲ್ಲಿ ಜೆಡಿಎಸ್, ಸಿಪಿಐ, ಆರ್'ಎಸ್'ಪಿ, ಜೆಎಂಎಂ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್, ಅಕಾಲಿ ದಳ, ಕಾಂಗ್ರೆಸ್, ಟಿಎಂಸಿ, ಸಿಪಿಐ-ಎಂ, ಜೆಡಿ-ಯು, ಡಿಎಂಕೆ, ಬಿಎಸ್'ಪಿ ಎನ್ ಸಿಪಿ ಮತ್ತು ಇನ್ನಿತರೆ ಪಕ್ಷಗಳು ಹಾಜರಿದ್ದವು. ಸಭೆಯಲ್ಲಿ ಚೀನಾ ಮತ್ತು ಭಾರತದ ಗಡಿಯಲ್ಲಿ ಮತ್ತು ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿಗಳು ತೀರಾ ಹದಗೆಡುತ್ತಿದ್ದು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆಂದು ತಿಳಿಸಿದ್ದಾರೆ. 
ಸಭೆ ಬಳಿಕ ಮಾತನಾಡಿದ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಾಜಾ ಅವರು, ಭಾರತ, ಚೀನಾ ಮತ್ತು ಭೂತಾನ್  ಸಂಬಂಧಿಸಿದ ಡೋಕ್ಲಾಮ್ ಪ್ರದೇಶದಲ್ಲಿ ಹಲವಾರು ವ್ಯತ್ಯಾಗಳಿವೆ. ಗಡಿ ವಿವಾದ ಸಂಬಂಧ ಪ್ರಸ್ತುತ ಸಂಧಾನ ಪ್ರಕ್ರಿಯೆಗಳು ಮುಂದುವರೆದಿದ್ದು, ಗಡಿಯಲ್ಲಿ ಯಾವುದೇ ಉದ್ನಿಗ್ನತೆಯಿಲ್ಲ ಎಂದು ಸಭೆಯಲ್ಲಿ ಸರ್ಕಾರ ತಿಳಿಸಿದೆ. ಡೋಕ್ಲಾಮ್ ವಿವಾದವನ್ನು ಸಾಧ್ಯವಾದಷ್ಟು ಶೀಘ್ರಗತಿಯಲ್ಲಿ ಬಗೆಹರಿಸುವಂತೆಯೂ ಸರ್ಕಾರತ್ತೆ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ. 

ಆದರೆ, ಸಭೆಯಲ್ಲಿ ಕಾಶ್ಮೀರದ ವಿಚಾರ ಸಂಬಂಧ ಯಾವುದೇ ಚರ್ಚೆಗಳನ್ನು ನಡೆಸಲಾಗಲಿಲ್ಲ. ಆದರೆ, ಅಮರನಾಥ ಯಾತ್ರೆ ಮೇಲಿನ ಉಗ್ರರ ದಾಳಿ ಪ್ರಕರಣದ ಕುರಿತು ಚರ್ಚೆ ನಡೆಯಿತು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com