ಮಣಿಪುರ: ಬಿಜೆಪಿ ನೇತೃತ್ವದ ಸರ್ಕಾರ ಸೇರಿದ ಇಬ್ಬರು ಕಾಂಗ್ರೆಸ್ ಶಾಸಕರು

ಕಾಂಗ್ರೆಸ್ ತೊರೆದ ಇಬ್ಬರು ಶಾಸಕರು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಆಡಳಿತ ರೂಢ ಸರ್ಕಾರದ ಶಾಸಕರ ಸಂಖ್ಯೆ ...
ಮುಖ್ಯಮಂತ್ರಿ ಬಿರೇನ್ ಸಿಂಗ್
ಮುಖ್ಯಮಂತ್ರಿ ಬಿರೇನ್ ಸಿಂಗ್
ಇಂಫಾಲ: ಕಾಂಗ್ರೆಸ್ ತೊರೆದು ಇಬ್ಬರು ಶಾಸಕರು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಆಡಳಿತ ರೂಢ ಸರ್ಕಾರದ ಶಾಸಕರ ಸಂಖ್ಯೆ 40 ಕ್ಕೇರಿದೆ.
ಮಣಿಪುರ ವಿಧಾನಸಭೆಯಲ್ಲಿ ಶಾಸಕರ ಒಟ್ಟು ಸಂಖ್ಯೆ 60,  ಕಾಂಗ್ರೆಸ್ ಶಾಸಕರಾದ ಕ್ಷೇತ್ರಿಮಾಯುಮ್ ಬಿರೇನ್ ಸಿಂಗ್ ಮತ್ತು ಪೊನಮ್ ಬ್ರೊಜೆನ್ ಕಳೆದ ಶನಿವಾರ ಬಿಜೆಪಿ ಸೇರಿದ್ದಾರೆ. ಇದರಿಂದ ಬಿಜೆಪಿ ಶಾಸಕರ ಸಂಖ್ಯೆ 31 ಕ್ಕೇರಿದೆ, 
ಸದ್ಯ ಬಿಜೆಪಿ ಶಾಸಕರ ಸಂಖ್ಯೆ 31 ಇದೆ. ಎನ್ ಪಿಎಫ್ ನ ನಾಲ್ಕು ಹಾಗೂ ಎನ್ ಪಿಪಿಯ ನಾಲ್ಕು ಮತ್ತು ಒಬ್ಬ ಸ್ವತಂತ್ರ್ಯ ಅಭ್ಯರ್ಥಿ ಸೇರಿದಂತೆ ಒಟ್ಟು 9 ಶಾಸಕರು ಸಿಎಂ ಎನ್ ಬಿರೇನ್ ಸಿಂಗ್ ಸರ್ಕಾರದಲ್ಲಿದ್ದಾರೆ.
2017ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಒಟ್ಟು 28 ಶಾಸಕರು ಆಯ್ಕೆಯಾಗಿದ್ದರು, ಅದರಲ್ಲಿ 8 ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com