ಗಂಡನ ಅನೈತಿಕ ಸಂಬಂಧದಿಂದ ಮೊದಲೇ ರೋಸಿ ಹೋಗಿದ್ದ 30 ವರ್ಷದ ಪತ್ನಿ ಒಂದು ವರ್ಷದಿಂದ ಆತನಿಂದ ದೂರವಾಗಿದ್ದಳು. ಮತ್ತೆ ಕಳೆದ ಎರಡು ತಿಂಗಳಿನಿಂದ ಇಬ್ಬರು ಜತೆಯಲ್ಲೆ ವಾಸವಾಗಿದ್ದರು. ನಿನ್ನೆ ಮಧ್ಯರಾತ್ರಿ ಸುಮಾರು 3.30ರ ಸುಮಾರಿನಲ್ಲಿ ಹೆಂಡತಿ ಜತೆ ಸೆಕ್ಸ್ ಮಾಡಲು ಪತಿ ಮುಂದಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಅಲ್ಲದೆ ಆತ ಪತ್ನಿಯ ಮೇಲೆ ಅತ್ಯಾಚಾರಕ್ಕೂ ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಅಡುಗೆ ಕೋಣೆಗೆ ಹೋಗಿ ಚಾಕುವನ್ನು ತಂದು ಇನ್ನು ಮುಂದೆ ಸೆಕ್ಸ್‌ಗೆ ಬಲವಂತ ಮಾಡಲೇಬಾರದು ಎಂದು ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ ಎಂದು ಸಬ್ ಇನ್ಸ್ ಪೆಕ್ಟರ್ ಜೆ ಕೃಷ್ಣಮೂರ್ತಿ ಹೇಳಿದ್ದಾರೆ.