ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್
ದೇಶ
ಮಾದಕ ವ್ಯಸನಿಗಳನ್ನು ಕ್ರಿಮಿನಲ್'ಗಳೆಂದು ಅಲ್ಲ, ಸಂತ್ರಸ್ತರೆಂದು ಪರಿಗಣಿಸಲಾಗುತ್ತದೆ: ಸಿಎಂ ಕೆಸಿಆರ್
ಡ್ರಗ್ಸ್ ಮಾಫಿಯಾದಲ್ಲಿ ಟಾಲಿವುಡ್ ನಟ-ನಟಿ ಹಾಗೂ ನಿರ್ದೇಶಕರ ಹೆಸರುಗಳು ಕೇಳಿಬಂದಿದ್ದು, ಇದೀಗ ಭಾರೀ ಸುದ್ದಿಗೆ ಗ್ರಾಸವಾಗಿರುವ ಬೆನ್ನಲ್ಲೇ, ಮಾದಕ ವ್ಯಸನಿಗಳನ್ನು ಕ್ರಿಮಿನಲ್'ಗಳೆಂದು ಅಲ್ಲದೇ ಸಂತ್ರಸ್ತರೆಂದು ಪರಿಗಣಿಸಲಾಗುತ್ತದೆ...
ಹೈದರಾಬಾದ್; ಡ್ರಗ್ಸ್ ಮಾಫಿಯಾದಲ್ಲಿ ಟಾಲಿವುಡ್ ನಟ-ನಟಿ ಹಾಗೂ ನಿರ್ದೇಶಕರ ಹೆಸರುಗಳು ಕೇಳಿಬಂದಿದ್ದು, ಇದೀಗ ಭಾರೀ ಸುದ್ದಿಗೆ ಗ್ರಾಸವಾಗಿರುವ ಬೆನ್ನಲ್ಲೇ, ಮಾದಕ ವ್ಯಸನಿಗಳನ್ನು ಕ್ರಿಮಿನಲ್'ಗಳೆಂದು ಅಲ್ಲದೇ ಸಂತ್ರಸ್ತರೆಂದು ಪರಿಗಣಿಸಲಾಗುತ್ತದೆ ಎಂದು ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿರುವ ಸಿಎಂ ಚಂದ್ರಶೇಖರ್ ರಾವ್ ಅವರು, ಮಾದಕ ವ್ಯಸನಿಗಳನ್ನು ಕ್ರಿಮಿನಲ್ ಗಳಾಗಿ ಅಲ್ಲದೆ, ಸಂತ್ರಸ್ತರೆಂದು ಪರಿಗಣಿಸಿ ಸ್ಪಂದನೆ ನೀಡಬೇಕೆಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಸುದ್ದಿಗಾರಿರೊಂದಿಗೆ ಮಾತನಾಡಿರುವ ಕೆಸಿಆರ್ ಅವರು, ಮಾದಕ ವ್ಯಸನಿಗಳ ವಿರುದ್ಧ ಯಾವ ಪ್ರಕರಣಗಳನ್ನೂ ದಾಖಲಿಸುವುದಿಲ್ಲ. ಬದಲಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಕ್ರಿಮಿನಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಪ್ರಕರಣದಲ್ಲಿ ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದಿದ್ದಾರೆ.
ಚಿತ್ರರಂಗವನ್ನು ಸರ್ಕಾರದ ಗುರಿಯಾಗಿಸುತ್ತಿದೆ ಎಂಬ ಪ್ರಶ್ನೆಗಳೇ ಬರುವದಿಲ್ಲ. ಪ್ರಕಱಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಮಾದಕ ವಸ್ತುಗಳನ್ನು ಸ್ಪೇನ್, ಥೈಲಾಂಡ್, ಪೋರ್ಚುಗಲ್, ನೈಜೀರಿಯಾ, ನೆದರ್ ಲ್ಯಾಂಡ್ ಗಳಿಂದ ಕಳ್ಳಸಾಗಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮಾದಕವಸ್ತುಗಳು ಕಳ್ಳಸಾಗಣೆಯಾಗಲು ಸರ್ಕಾರ ಬಿಡುವುದಿಲ್ಲ. ಮೂಲದಲ್ಲೇ ಮಾದಕವಸ್ತುಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

