ಎಎನ್ಐ ನೊಂದಿಗೆ ಮಾತನಾಡಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಬ್ಸಿಡಿ ರಹಿತವಾಗಿ ಸಿಲಿಂಡರ್ ಖರೀದಿಸಲು ಸಾಧ್ಯವಿರುವವರು ಸಬ್ಸಿಡಿಯನ್ನು ಬಿಟ್ಟುಕೊಡುವಂತೆ, ಆ ಮೂಲಕ ಬಡವರಿಗೆ ಸಬ್ಸಿಡಿ ಸಿಲಿಂಡರ್ ಸಿಗುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ವೇಳೆ ಅವರ ಪಕ್ಷದವರು ಕರೆ ನೀಡುತ್ತಿದ್ದರು. ಈಗ ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ದರವನ್ನೂ ಏರಿಕೆ ಮಾಡಿದೆ. ಇದರಿಂದಾಗಿ ಬಡವರೂ ಸಹ ಸಬ್ಸಿಡಿ ರಹಿತ ಸಿಲಿಂಡರ್ ನಷ್ಟೆ ಹಣ ಕೊಟ್ಟು ಸಿಲಿಂಡರ್ ನ್ನು ಖರೀದಿಸಬೇಕಾದ ಸ್ಥಿತಿ ಉಂತಾಗುತ್ತದೆ, ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಸಿಪಿ(ಐ)ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆಗ್ರಹಿಸಿದ್ದಾರೆ.