ಲೆಹೆಂಗಾ ಬದಲು ಚಡ್ಡಿ ತೊಟ್ಟ ಮಧುಮಗಳು: ವಿಡಿಯೋ ವೈರಲ್

ಸಾಮಾನ್ಯವಾಗಿ ಮದುಮಗಳು ದುಬಾರಿ ವೆಚ್ಚದ ಸೀರೆ ಅಥವಾ ಲೆಹೆಂಗಾ ಖರೀದಿಸಿ ತೊಡುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬಳು ವಧು ತನ್ನ ಮದುವೆಯ ದಿನ ...
ಲೆಹೆಂಗಾ ಬದಲು ಶಾರ್ಟ್ಸ್ ಧರಿಸಿದ ವಧು
ಲೆಹೆಂಗಾ ಬದಲು ಶಾರ್ಟ್ಸ್ ಧರಿಸಿದ ವಧು
ನವದೆಹಲಿ: ಸಾಮಾನ್ಯವಾಗಿ ಮದುಮಗಳು ದುಬಾರಿ ವೆಚ್ಚದ ಸೀರೆ ಅಥವಾ ಲೆಹೆಂಗಾ ಖರೀದಿಸಿ ತೊಡುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬಳು ವಧು ತನ್ನ ಮದುವೆಯ ದಿನ ಲೆಹೆಂಗಾ ಬ್ಲೌಸ್ ಹಾಕಿ ಸ್ಕರ್ಟ್ ಹಾಕೋ ಬದಲು ಶಾರ್ಟ್ಸ್ ಹಾಕಿದ್ದಾಳೆ. ಮಧುಮಗಳ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದ್ರೆ ಮದುವೆ ಎಲ್ಲಿ ನಡೆದಿದೆ,  ವಧು ವರರ ಹೆಸರು ಏನು, ಮದುವೆ ಯಾವಾಗ ನಡೆದಿದೆ  ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಫೋಟೋ ಮಾತ್ರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ಫೋಟೋದಲ್ಲಿ ವರ ಜೊತೆ ನಿಂತಿದ್ದ ವಧು ಕೆಂಪು ಬಣ್ಣದ ಲೆಹೆಂಗಾ ಬ್ಲೌಸ್, ದುಪ್ಪಟ್ಟ ತೊಟ್ಟು, ಚಿನ್ನಾಭರಣಗಳನ್ನು ಧರಿಸಿ ಚೆನ್ನಾಗಿಯೇ ಮಿಂಚುತ್ತಿದ್ದಾಳೆ. ಆದ್ರೆ ಲೆಹೆಂಗಾ ಸ್ಕರ್ಟ್ ತೊಡುವ ಬದಲು ಶಾರ್ಟ್ಸ್ ಹಾಕಿದ್ದಾಳೆ.
ಈ ಫೋಟೋ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಗೆ ಅಪ್ಲೋಡ್ ಆದ ತಕ್ಷಣವೇ ಟಿಟ್ಟರಿಗರಲ್ಲಿ ಕೆಲವರು ಫನ್ನಿಯಾದ ಕಮೆಂಟ್ಸ್ ಗಳನ್ನು ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com