ಎಲ್ಲರ ಚಿತ್ತ ಚುನಾವಣಾ ಆಯೋಗದತ್ತ: ಪೂರ್ವ ನಿಗದಿಯಂತೆ ಹ್ಯಾಕಥಾನ್ ನಡೆಸಲು ಸಜ್ಜು

ವಿದ್ಯಾನ್ಮಾನ ಮತಯಂತ್ರ (ಇವಿಎಂ) ಗೋಲ್ ಮಾಲ್ ನಡೆಸಲಾಗಿದೆ ಎಂಬ ಆರೋಪವನ್ನು ಸಾಬೀತು ಪಡಿಸುವಂತೆ ಪ್ರತಿರಕ್ಷಗಳಿಗೆ ಚುನಾವಣಾ ಆಯೋಗ ಒಡ್ಡಿರುವ 'ಹ್ಯಾಕಥಾನ್' ಸವಾಲಿಗೆ ಉತ್ತರಾಖಂಡ್ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಹಲವು ಗೊಂದಲ ನಡುವೆಯೂ...
ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಕುರಿತಂತೆ ಮಾತನಾಡುತ್ತಿರುವ ಚುನಾವಣಾಧಿಕಾರಿಗಳು
ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಕುರಿತಂತೆ ಮಾತನಾಡುತ್ತಿರುವ ಚುನಾವಣಾಧಿಕಾರಿಗಳು
Updated on: 
ನವದೆಹಲಿ: ವಿದ್ಯಾನ್ಮಾನ ಮತಯಂತ್ರ (ಇವಿಎಂ) ಗೋಲ್ ಮಾಲ್ ನಡೆಸಲಾಗಿದೆ ಎಂಬ ಆರೋಪವನ್ನು ಸಾಬೀತು ಪಡಿಸುವಂತೆ ಪ್ರತಿರಕ್ಷಗಳಿಗೆ ಚುನಾವಣಾ ಆಯೋಗ ಒಡ್ಡಿರುವ 'ಹ್ಯಾಕಥಾನ್' ಸವಾಲಿಗೆ ಉತ್ತರಾಖಂಡ್ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಹಲವು ಗೊಂದಲ ನಡುವೆಯೂ ಪೂರ್ವ ನಿಗದಿಯಂತೆಯೇ ಹ್ಯಾಕಥಾನ್ ನಡೆಸಲು ಚುನಾವಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಂಡಿದೆ. 
ಚುನಾವಣಾ ಆಯೋಗದ ಹ್ಯಾಕಥಾನ್ ಕ್ರಮವನ್ನು ಉತ್ತರಾಖಂಡ್ ನ್ಯಾಯಾಲಯದ ಕೆಲ ದಿನಗಳ ಹಿಂದಷ್ಟೇ ಅಸಾಂವಿಧಾನಿಕ ಎಂದು ಬಣ್ಣಿಸಿ, ಈ ಕುರಿತು ವರದಿ ನೀಡುವಂತೆ ಆದೇಶಿಸಿತ್ತು. ಆದರೂ ಪೂರ್ವ ನಿಗದಿಯಂತೆಯೇ ಹ್ಯಾಕಥಾನ್ ನಡೆಸುವ ಪಟ್ಟು ಮುಂದುವರೆಸಿರುವ ಚುನಾವಣಾ ಆಯೋಗ ಇದಕ್ಕಾಗಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ 14 ಮತಯಂತ್ರಗಳನ್ನು ಸಜ್ಜಾಗಿರಿಸಿದೆ. 
ಚುನಾವಣಾ ಆಯೋಗ ತನ್ನು ಪಟ್ಟು ಮುಂದುವರೆಸಿರುವ ಹಿನ್ನಲೆಯಲ್ಲಿ ಆಯೋಗದ ಸವಾಲನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಸಿಬಿಐ(ಎಂ) ಸ್ವೀಕರಿಸಿದ್ದು, ಹ್ಯಾಕಥಾನ್ ನಲ್ಲಿ ಭಾಗವಹಿಸುವುದಾಗಿ ಹೇಳಿಕೊಂಡಿದೆ. 
ರಾಜಧಾನಿ ದೆಹಲಿಯಲ್ಲಿರುವ ಚುನಾವಣಾ ಆಯೋಗದ ಮುಖ್ಯ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಹ್ಯಾಕಥಾನ್ ಆರಂಭಕ್ಕೆ ಸಮಯವನ್ನು ನಿಗದಿಪಡಿಸಲಾಗಿದ್ದು, ಮಧ್ಯಾಹ್ನ 2 ಗಂಟೆ ಸಮಯದೊಳಗೆ ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷ ತಮಗೆ ಆಯೋಗ ನೀಡಿದ ಇವಿಎಂಗಳನ್ನು ಮಾರ್ಪಡಿಸಿ ಅದರ ದುರುಪಯೋಗ ಸಾಧ್ಯತೆಯನ್ನು ಸಾಬೀತುಪಡಿಸಬೇಕು. ಇವಿಎಂ ಮಾರ್ಪಾಡು ವೇಳೆ ಆಯೋಗ ನೀಡಿರುವ ಷರತ್ತು ನಿಯಮಗಳ ಅನುಸಾರವಾಗಿಯೇ ಪಕ್ಷದಳು ಪ್ರಯೋಗವನ್ನು ಮಾಡಬೇಕಾಗುತ್ತದೆ. 
ಹ್ಯಾಕಥಾನ್ ನಲ್ಲಿ ಭಾಗವಹಿಸಲು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಸಿಪಿಐ(ಎಂ) ಅರ್ಜಿಯನ್ನು ಸಲ್ಲಿಸಿದ್ದು, ಈ ಎರಡೂ ಪಕ್ಷಗಳಿಗೆ ಆಯೋಗ ಅವಕಾಶವನ್ನು ಕಲ್ಪಿಸಿದೆ. 
ಹ್ಯಾಕಥಾನ್ ಕುರಿತಂತೆ ಹೇಳಿಕೆ ನೀಡಿರುವ ಸಿಪಿಐ(ಎಂ), ಚುನಾವಣಾ ಆಯೋಗ ನೀಡಿರುವ ಸವಾಲಿನಲ್ಲಿ ಭಾಗವಹಿಸುವ ನಾವು ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡುವ ಪ್ರಯತ್ನಗಳ್ನು ಮಾಡುವುದಿಲ್ಲ. ಆದರೆ, ಪಾರದರ್ಶಕ ಚುನಾವಣೆ ನಡೆಸಲು ಬೇಕಾದ ಅಗತ್ಯಗಳ ಕುರಿತಂತೆ ತಿಳಿಸಲಾಗುತ್ತದೆ ಎಂದು ಹೇಳಿದೆ. 
ಇನ್ನು ಈ ನಡುವೆ ಆಮ್ ಆದ್ಮಿ ಪಕ್ಷ ಪ್ರತ್ಯೇಕ ಹ್ಯಾಕಥಾನ್ ನಡೆಸಲು ತೀರ್ಮಾನಿಸಿದ್ದು, ಈ ಮೂಲಕ ಚುನಾವಣಾ ಆಯೋಗದ ಸವಾಲಿನಿಂದ ದೂರ ಉಳಿದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com