ನವದೆಹಲಿ: 2017ನೇ ಸಾಲಿನ ಅಮರನಾಥ ಯಾತ್ರೆಗೆ ತೆರಳುವ ಯಾತ್ರಿಕರ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಅಮರನಾಥ ದೇವಾಲಯ ಮಂಡಳಿ ಬ್ಯಾಂಕ್ ಗಳ ಮೂಲಕ ಯಾತ್ರಿಕರು ದಾಖಲಾತಿ ಮಾಡಿಕೊಳ್ಳಲು ಪ್ರಕ್ರಿಯೆಗಳನ್ನು ಹೊರಡಿಸಿದೆ.
1. ದಾಖಲಾತಿ ಮತ್ತು ಯಾತ್ರೆಗೆ ಅನುಮತಿ(ವೈಪಿಎಸ್) ನ್ನು ಮೊದಲು ಬಂದವರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ.
2. ಒಂದು ಬಾರಿ ದಾಖಲು ಮಾಡಿಕೊಂಡರೆ ಅದು ಒಂದು ಸಲಕ್ಕೆ ಮಾತ್ರ ಮೌಲ್ಯವನ್ನು ಹೊಂದಿರುತ್ತದೆ.
3. ಪ್ರತಿ ದಾಖಲಾತಿ ಶಾಖೆಗಳಲ್ಲಿ ನಿರ್ದಿಷ್ಟ ದಿನಗಳು ಮತ್ತು ಪ್ರತಿ ಮಾರ್ಗ ಕೋಟಾವನ್ನು ಹೊಂದಿರುತ್ತದೆ.
4. 13 ವರ್ಷಕ್ಕಿಂತ ಚಿಕ್ಕ ಮಕ್ಕಳು, 75 ವರ್ಷ ದಾಟಿದ ವಯೋವೃದ್ಧರು ಮತ್ತು 6 ವಾರಗಳನ್ನು ಮೀರಿದ ಗರ್ಭಿಣಿಯರನ್ನು ಯಾತ್ರೆಗೆ ದಾಖಲಾತಿ ಮಾಡಿಕೊಳ್ಳಲು ಬಿಡುವುದಿಲ್ಲ.
5. ಪ್ರತಿ ಯಾತ್ರಿಯೂ ಅರ್ಜಿ ಸಲ್ಲಿಸಬೇಕು ಮತ್ತು ಕಡ್ಡಾಯವಾಗಿ ಆರೋಗ್ಯ ಪ್ರಮಾಣ ಪತ್ರ ನೀಡಬೇಕು.
6. ದಾಖಲಾತಿ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿಗಳು ದೊರೆಯುತ್ತವೆ.