ನವದೆಹಲಿ: ಸದಾ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ಕೇಂದ್ರ ವಿದೇಶಾಂಗ ಸಚಿವೆ ತಮ್ಮ ಫಾಲೋವರ್ಸ್ ಗಳ ಟ್ಟೀಟ್ ಗೆ ಶೀಘ್ರವಾಗಿ ಸ್ಪಂದಿಸುತ್ತಾರೆ. ಹಾಗೂ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾರೆ. ಹೀಗಾಗಿ ಸುಷ್ಮಾ ಹೆಚ್ಚು ಜನಪ್ರಿಯರಾಗಿದ್ದಾರೆ.
ಟ್ವಿಟ್ಟರ್ ನಲ್ಲಿ ಸುಷ್ಮಾ ಸ್ವರಾಜ್ ಗೆ 8 ಮಿಲಿಯನ್ ಗೂ ಹೆಚ್ಚು ಹಿಂಬಾಲಕರಿದ್ದಾರೆ, ತಮ್ಮ ಸಹಾಯ ಕೋರಿ ಬರುವ ಸಾವಿರಾರು ಟ್ವೀಟ್ ಗಳಿಗೆ ಸುಷ್ಮಾ ರೀ ಟ್ವೀಟ್ ಮಾಡುತ್ತಾರೆ.
ಇತ್ತೀಚೆಗೆ ವ್ಯಕ್ತಿಯೊಬ್ಬ ಮಾಡಿದ್ದ ಆಶ್ಚರ್ಯಕರ ಟ್ವೀಟ್ ಗೆ ಸುಷ್ಮಾ ತಮ್ಮ ಹಾಸ್ಯ ದಾಟಿಯಲ್ಲೇ ಉತ್ತರ ನೀಡಿದ್ದಾರೆ. ನಾನು ಮಂಗಳ ಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ, ಮಂಗಳಯಾನದ 987 ದಿನಗಳು ಮುಗಿದಿವೆ ಎಂದು ಟ್ವೀಟ್ ಮಾಡಿದ್ದಾರೆ.
ಒಂದು ವೇಳೆ ನೀವು ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದರೇ ಅಥವಾ ಬೇರೆ ಯಾವುದೇ ಗ್ರಹದಲ್ಲಿದ್ದರೂ, ಅಲ್ಲಿಯೂ ನಮ್ಮ ಭಾರತೀಯ ರಾಯಭಾರ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ ಎಂದು ರೀಟ್ವೀಟ್ ಮಾಡಿದ್ದಾರೆ.