ಪಾಕಿಸ್ತಾನ: ಯುಎಸ್ ವೈಮಾನಿಕ ದಾಳಿಯಲ್ಲಿ ಹಕ್ಕಾನಿ ಉಗ್ರ ಕಮಾಂಡರ್ ಹತ್ಯೆ

ಪಾಕಿಸ್ತಾನದಲ್ಲಿ ಹಕ್ಕಾನಿ ಉಗ್ರ ಕಮಾಂಡರ್ ನ್ನು ಅಮೆರಿಕ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಪ್ರಕಟಿಸಿವೆ.
ವೈಮಾನಿಕ ದಾಳಿ
ವೈಮಾನಿಕ ದಾಳಿ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಕ್ಕಾನಿ ಉಗ್ರ ಕಮಾಂಡರ್ ನ್ನು ಅಮೆರಿಕ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಪ್ರಕಟಿಸಿವೆ. 
ಸ್ಪೀನ್ ಟಾಲ್ ಪ್ರದೇಶದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿದ್ದು, ಹಕ್ಕಾನಿ ಉಗ್ರ ಜಾಲದ ಕಮಾಂಡರ್ ಅಬುಬಕರ್ ನ್ನು ಹತ್ಯೆ ಮಾಡಿರುವುದಾಗಿ ರೇಡಿಯೀ ಲಿಬರ್ಟಿಯ ಮಾಶಾಲ್ ರೆಡಿಯೋ ವರದಿ ಪ್ರಕಟಿಸಿದೆ. ಜೂ.12 ರಂದು ಮಧ್ಯರಾತ್ರಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಹೇಳಿದೆ, ಆದರೆ ಈ ಕುರಿತು ಪೆಂಟಗನ್ ಈ ವರೆಗೂ ಸ್ಪಷ್ಟನೆ ನೀಡಿಲಲ್. 
ವೈಮಾನಿಕ ದಾಳಿಯಲ್ಲಿ 3 ಜನರಿಗೆ ಗಾಯಗಳುಂಟಾಗಿದ್ದು, ಅಫ್ಘಾನಿಸ್ತಾನ ಮೂಲದ ಅಬುಬಕರ್ ನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com