ಗುವಾಹಟಿ: ಅಸ್ಸಾಂನಲ್ಲಿ ನೆರೆ ಪ್ರವಾಹದ ಸ್ಥಿತಿ ಭಾನುವಾರ ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದ್ದು ಲಖಿಂಪುರ್, ಕರಿಂಗಜ್ ಮತ್ತು ಸೊನಿತ್ ಪುರ ಜಿಲ್ಲೆಗಳಲ್ಲಿ ಸುಮಾರು 87,500 ಮಂದಿ ತತ್ತರಿಸಿಹೋಗಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯಂತೆ 131 ಗ್ರಾಮಗಳು ಪ್ರಸ್ತುತ ನೀರಿನಲ್ಲಿ ಮುಳುಗಡೆಯಾಗಿದ್ದು 148 ಹೆಕ್ಟೇರ್ ಕೃಷಿ ಭೂಮಿ ನಾಶಗೊಂಡಿದೆ.
ನಿನ್ನೆಯವರೆಗೆ ಅಸ್ಸಾಂನಾದ್ಯಂತ ಪ್ರಕೃತಿ ವಿಕೋಪಕ್ಕೆ 82,000 ಮಂದಿ ಸಿಲುಕಿದ್ದಾರೆ.ಸುಮಾರು 500 ಮಂದಿ ಕರಿಂಗಜ್ ಜಿಲ್ಲೆಯ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಸ್ಥಳೀಯರು ಕಳೆದ ತಿಂಗಳು 31ರದು ರಂಗನಾಡಿ ನೆರೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಶವವನ್ನು ಹೊರ ತೆಗೆದಿದ್ದಾರೆ. ಮಹಿಳೆಯನ್ನು ನೌಬೊಚಾದ ಪಲ್ಲಬಿ ಸೈಕಿಯಾ ಎಂದು ಗುರುತಿಸಲಾಗಿದೆ.