ಜೂ.26 ರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಷ್ಟ್ರ ಪ್ರವಾಸ: ಪುದುಚೆರಿಯಿಂದ ಪ್ರಾರಂಭ

ಬಿಜೆಪಿ ರಾಷ್ಟ್ರಾಧ್ಯಕ್ಷ ಅತಮಿತ್ ಶಾ ಜೂ.26 ರಿಂದ ರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಪುದುಚೆಯಿಂದ ಅಮಿತ್ ಶಾ ಅವರ ರಾಷ್ಟ್ರಪ್ರವಾಸ ಪ್ರಾರಂಭವಾಗಲಿದ್ದು,
ಅಮಿತ್ ಶಾ
ಅಮಿತ್ ಶಾ
Updated on: 
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅತಮಿತ್ ಶಾ ಜೂ.26 ರಿಂದ ರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಪುದುಚೆಯಿಂದ ಅಮಿತ್ ಶಾ ಅವರ ರಾಷ್ಟ್ರಪ್ರವಾಸ ಪ್ರಾರಂಭವಾಗಲಿದ್ದು, 
110 ದಿನಗಳ ಸುದೀರ್ಘ ಪ್ರವಾಸ ಇದಾಗಿರಲಿದ್ದು, ದೇಶಾದ್ಯಂತ ಬಿಜೆಪಿಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಪುದುಚೆರಿಗೆ ತೆರಳಲಿರುವ ಅಮಿತ್ ಶಾ, 2 ದಿನಗಳ ಕಾಲ ಅಲ್ಲೇ ಇರಲಿದ್ದು, ಪುದುಚೆರಿ ವಿಮಾನ ನಿಲ್ದಾಣದಲ್ಲಿರುವ ಕವಿ ಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. 
ಪುದುಚೆರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಸಲಿರುವ ಅಮಿತ್ ಶಾ, ಪಕ್ಷದ ಬಲವರ್ಧನೆ ದೃಷ್ಟಿಯಿಂದ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com