ಜಿಎಸ್'ಟಿ ಯಶಸ್ವಿ ಸಾಧ್ಯವೇ ಇಲ್ಲ ಎಂದಿದ್ದ ಮೋದಿ: ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

ಅಗತ್ಯ ಮೂಲಸೌಕರ್ಯಗಳಿಲ್ಲದೆಯೇ ಜಿಎಸ್'ಟಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದ ಹೇಳಿಕೆ ವಿಡಿಯೋವನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿದೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on: 
ನವದೆಹಲಿ: ಅಗತ್ಯ ಮೂಲಸೌಕರ್ಯಗಳಿಲ್ಲದೆಯೇ ಜಿಎಸ್'ಟಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದ ಹೇಳಿಕೆ ವಿಡಿಯೋವನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿದೆ. 
ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಜಾರಿಗೆ ಕೇಲವೇ ಗಂಟೆಗಳು ಬಾಕಿಯಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮೋದಿಯವರ ಹಳೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದೆ. 
ಜಿಎಸ್'ಟಿ ಬಗ್ಗೆ ನರೇಂದ್ರ ಮೋದಿ ಜೀ ಹಾಗೂ ಬಿಜೆಪಿಯವರ ಆಲೋಚನೆ ಇದು ಎಂಬ ಶೀರ್ಷಿಕೆ ನೀಡಿರುವ ನೀಡಿರುವ ಕಾಂಗ್ರೆಸ್ ವಿಡಿಯೋವನ್ನು ಟ್ವೀಟ್ ಮಾಡಿದೆ. 
ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮೋದಿಯವರೇ ಸ್ವತಃ ಜಿಎಸ್ ಟಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಹೇಳಿರುವುದು ಕಂಡು ಬಂದಿದೆ. ಜಿಎಸ್ ಟಿ ಪ್ರಶ್ನೆಗೆ ಬರುವುದಾದರೆ, ಇದು ಬಿಜೆಪಿಯ ಹಾಗೂ ಗುಜರಾತ್ ರಾಜ್ಯ ಸರ್ಕಾರದ ದೃಷ್ಟಿಕೋನ. ಆರಂಭದಿಂದಲೂ ಹೇಳುತ್ತಿರುವಂತೆಯೇ ಜಿಎಸ್ ಟಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. 
ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಇಲ್ಲದೆಯೇ ಜಿಎಸ್ ಟಿ ಜಾರಿ ಅಸಾಧ್ಯ. ಇಡೀ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಜಾಲ ಸೃಷ್ಟಿಯಾಗುವವರೆಗೆ ಜಿಎಸ್ ಜಾರಿ ಸಾಧ್ಯವೇ ಇಲ್ಲ. ಏಕೆಂದರೆ, ಅದರ ರಚನೆಯೇ ಹಾಗೆ ಆಗಿದೆ ಎಂದು ಮೋದಿಯವರು ಹೇಳಿರುವುದು ಕಂಡು ಬಂದಿದೆ. 
ಮೋದಿಯವರು ನೀಡಿರುವ ಈ ಹೇಳಿಕೆಯ ವಿಡಿಯೋವನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ಮೋದಿ ಜೀ ನಿಮ್ಮ ಮಾತುಗಳನ್ನೇ ಎಷ್ಟು ಬೇಗ ಮರೆತುಬಿಟ್ಟಿರಿ. ಸರಿಯಾದ ಮೂಲಸೌಕರ್ಯ ಅಭಿವೃದ್ಧಿಪಡಿಸದೆಯೇ ಜಿಎಸ್'ಟಿ ಜಾರಿಗೆ ಹೇಗೆ ಮುಂದಾದಿರಿ? ಎಂದು ವ್ಯಂಗ್ಯವಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com